ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ಶಾಖೆ, ಸೆಕ್ಟರ್, ಡಿವಿಷನ್, ಜಿಲ್ಲೆ ಹಾಗೂ ರಾಜ್ಯ ಸಮಿತಿಗಳ 2018-19 ನೇ ಸಾಲಿನ ಚುನಾವಣಾ ಪ್ರಕ್ರಿಯೆಗಳು ನವೆಂಬರ್ ಒಂದರಿಂದ ಜನವರಿ ಕೊನೆಯ ತನಕ ನಡೆಯಲಿದ್ದು ಈ ಸಂಬಂಧವಾಗಿ 2/9/2018ರಂದು ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ
ನಡೆದ ರಾಜ್ಯಸಮಿತಿ ಸಭೆಯಲ್ಲಿ ಎಸ್ ಎಸ್ ಎಫ್ ಹಿರಿಯ ನಾಯಕ,ನಿಕಟ ಪೂರ್ವ ರಾಜ್ಯ ಪ್ರ: ಕಾರ್ಯದರ್ಶಿ ಸಂಘಟನಾ ತಜ್ಞ, ಹಾಲಿ ಎಸ್ ಎಸ್ ಎಫ್ ಸುಪ್ರೀಂ ಕೌನ್ಸಿಲ್ ಕಾರ್ಯದರ್ಶಿಯೂ ಆಗಿರುವ ಎಂಬಿಎಂ ಸಾದಿಕ್ ಮಾಸ್ಟರ್ ಅವರನ್ನು ಅಧ್ಯಕ್ಷರಾಗಿಯು ಹಾಫಿಳ್ ಯಾಕೂಬ್ ಸಅದಿ ನಾವೂರು ಇವರನ್ನು ಕಾರ್ಯದರ್ಶಿಯಾಗಿಯೂ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಸಯ್ಯಿದ್ ಸಿಟಿಎಂ ತಂಙಳ್ ಮನ್ಶರ್, ಯಾಕೂಬ್ ಮಾಸ್ಟರ್ ಕೊಡಗು, ಶರೀಫ್ ಬೆಂಗಳೂರು, ಹಮೀದ್ ಮುಸ್ಲಿಯಾರ್ ಶಿವಮೊಗ್ಗ, ಅಬ್ದುಲ್ ರವೂಫ್ ಕುಂದಾಪುರ, ಇವರು ಚುನಾವಣಾ ಮಂಡಳಿಯ ಇತರ ಸದಸ್ಯರಾಗಿರುತ್ತಾರೆ.
ವರದಿ:ಅಡ್ವಕೇಟ್ ಇಲ್ಯಾಸ್ ನಾವುಂದ
ಪ್ರ ಕಾರ್ಯದರ್ಶಿ SSFರಾಜ್ಯ ಸಮಿತಿ