ನವದೆಹಲಿ: ಮುಂದಿನ ಆರರಿಂದ ಎಂಟು ತಿಂಗಳ ಅವಧಿಯಲ್ಲಿ ದೇಶದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ತಂತ್ರಜ್ಞಾನದ ಮೂಲಕ ದೇಶದ ಕೊನೆಯ ಮೈಲಿಯನ್ನೂ ತಲುಪಲು ಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರತಿ ರೈಲಿಗೆ ಜಿಪಿಎಸ್ ಸಾಧನ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡರೆ ರೈಲು ಯಾವ ಸ್ಥಳದಲ್ಲಿದೆ ಎಂದು ಮೊಬೈಲ್‌ನಲ್ಲಿಯೇ ತಿಳಿಯಬಹುದು ಎಂದಿದ್ದಾರೆ.
ರೈಲ್ವೆ ನಿಲ್ದಾಣದ ಅಧಿಕಾರಿಯು ರೈಲುಗಳ ಸಮಯವನ್ನು ಪುಸ್ತಕದಲ್ಲಿ ದಾಖಲಿಸುವ ಹಳೆಯ ಪದ್ಧತಿಯನ್ನು ಕೈಬಿಟ್ಟಿದ್ದು, ಗಣಕೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.