ರಿಯಾದ್: ಸೌದಿ ರೈಲ್ವೇ ಕಂಪನಿ ಈದ್ ಅಲ್ ಅದ್’ಹಾ ರಜೆಯಲ್ಲಿ ಹೆಚ್ಚುವರಿ ರೈಲುಗಳ ಓಡಾಟಕ್ಕೆ ಸಜ್ಜುಗೊಳಿಸುತ್ತಿದೆ. ಉತ್ತರ ಮತ್ತು ದಕ್ಷಿಣ ಮಾರ್ಗದಲ್ಲಿ ಏಳು ರೈಲು ಸೇವೆಗಳನ್ನು ನಡೆಸುವುದಾಗಿ ರೈಲ್ವೇ ಕಂಪನಿಯು ತಿಳಿಸಿವೆ.
ಸೌದಿ ರೈಲ್ವೇ ಕಂಪನಿಯು ರಿಯಾದ್-ಮಜ್ಮಾ-ಅಲ್ ಖಸೀಮ್-ಹೈಲ್ ಮಾರ್ಗಗಳಲ್ಲಿ ಹೆಚ್ಚುವರಿ ಸರ್ವೀಸ್ಗಳನ್ನು ನಡೆಸಲಿದೆ. ರೈಲ್ವೇ ಗ್ರಾಹಕ ಸೇವೆಯ ನಿರ್ದೇಶಕ ಝಿಯಾದ್ ಅಲ್ ಬತಾಹ್ ಈ ಬಗ್ಗೆ ವಿವರಿಸಿ, ಜನವರಿ 16 ರಿಂದ 19ರ ವರೆಗೆ ನಾಲ್ಕು ಮತ್ತು 23 ರಿಂದ 25 ರವರೆಗೆ ಮೂರು ರೈಲುಗಳು ಸೇವೆ ಒದಗಿಸಲಿದೆ ಎಂದು ಹೇಳಿದರು.
ಪ್ರಯಾಣಿಕರು ಹೆಚ್ಚಾದಲ್ಲಿ ರಜಾದಿನಗಳಲ್ಲಿ ಇನ್ನಷ್ಟು ಸೇವೆಗಳು ಲಭ್ಯವಾಗಲಿದೆ. ಸೌದಿ ರೈಲ್ವೆ ಕಂಪೆನಿಯ ಮೊಬೈಲ್ ಅಪ್ಲಿಕೇಶನ್ನಿಂದ ಮತ್ತು ವೆಬ್ಸೈಟ್ ಮೂಲಕ ಟಿಕೆಟ್ ಗಳನ್ನು ಖರೀದಿಸಬಹುದು. ರೈಲು ನಿಲ್ದಾಣದ ಕೌಂಟರ್ಗಳಲ್ಲಿ ಸಹ ಟಿಕೆಟ್ ಲಭ್ಯವಿದೆ.
ಪ್ರಯಾಣಿಕರು ಆರ್ಥಿಕ ಮತ್ತು ವ್ಯಾಪಾರ ವರ್ಗ ಟಿಕೆಟ್ ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಪಡೆಯುವಂತೆ ಅವರು ಹೇಳಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ರಿಯಾದ್-ಹೈಲ್ ರೈಲು ಸೇವೆಯನ್ನು ಪ್ರಾರಂಭಿಸಲಾಯಿತು. ಪ್ರಯಾಣಿಕರ ಸಂಖ್ಯೆಯಲ್ಲಿ 139 ರಷ್ಟು ಏರಿಕೆಯಾಗಿದೆ ಎಂದು ರೈಲ್ವೇ ತಿಳಿಸಿದೆ.