ಸೌದಿ ಅರೇಬಿಯ:- ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ವತಿಯಿಂದ ಭಾರತದ 72ನೇ ಸ್ವಾತಂತ್ರ್ಯೋತ್ಸವ’ವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ ಯವರು ಧ್ವಜಾರೋಹಣ ನೆರವೇರಿಸಿದರು.ರಿಯಾದ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಫಾರೂಕ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉದ್ಘಾಟಿಸಿ ಸ್ವತಂತ್ರ ಭಾರತದ ಮಣ್ಣಲ್ಲಿ ಎಲ್ಲಾ ಭಾರತೀಯರೀಗೂ ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಶರೀಫ್ ಅಮಾನಿ, ಉಸ್ಮಾನ್ ಪರಪ್ಪು, ಉಪಸ್ಥಿತರಿದ್ದರು.
ಅಶ್ರಫ್ ಮದನಿ ಸ್ವಾಗತಿಸಿ ಕೊನೆಯಲ್ಲಿ ಅಶ್ರಫ್ ಕೆಎಮ್ಮೆಸ್ ವಂದಿಸಿದರು.