janadhvani

Kannada Online News Paper

ಸುರಿಬೈಲು: ಆ.14ಕ್ಕೆ ದಾರುಲ್ ಅಶ್ಅರಿಯ್ಯ ದಲ್ಲಿ ಬೃಹತ್ ಅಧ್ಯಯನ ಶಿಬಿರ

ಸುರಿಬೈಲು: ಕರ್ನಾಟಕ ಹನೀಫೀಸ್ ಅಸೋಸಿಯೇಷನ್ ಮತ್ತು SJM ಬೋಳಂತೂರು ರೇಂಜ್,ಜಂಟಿಯಾಗಿ ಆಗಸ್ಟ್ 14 ಕ್ಕೆ ಬೃಹತ್ ಅಧ್ಯಯನ ಶಿಬಿರವನ್ನು ಆಯೋಜಿಸಿದೆ.

ಮಂಗಳವಾರ ಬೆಳಿಗ್ಗೆ 10:30ಕ್ಕೆ ಸುರಿಬೈಲು ದಾರುಲ್ ಅಶ್ಅರಿಯ್ಯ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮುಖ ವಿಧ್ವಾಂಸರಾದ ಶೈಖುನಾ ಪಿ.ಎ.ಉಸ್ತಾದ್ ತಸವ್ವುಫ್ ಎಂಬ ವಿಷಯದಲ್ಲಿ ತರಗತಿಯನ್ನು ನಡೆಸಿ ಕೊಡಲಿದ್ದಾರೆ.

ಮಧ್ಯಾಹ್ನ ಮರ್ಹೂಂ ಶೈಖುನಾ ಮಮ್ಮಿಕುಟ್ಟಿ ಉಸ್ತಾದರ ಆಂಡ್ ನೇರ್ಚೆ ಸ್ವಾಗತ ಸಮಿತಿ ರಚನೆ ಮತ್ತು ಮರ್ಹೂಂ ನೆಕ್ಕಿಲಾಡಿ ಉಸ್ತಾದರ ಅನುಸ್ಮರಣೆ ಸಂಗಮ ನಡೆಯಲಿದೆ.ಕಾರ್ಯಕ್ರಮವು KSOCR ನಲ್ಲಿ ನೇರ ಪ್ರಸಾರಗೊಳ್ಳಲಿದೆ.