ಅಬುಧಾಬಿ: ಸಾಮೂಹಿಕ ಕ್ಷಮಾಪಣೆಗೆ ಅರ್ಜಿ ಸಲ್ಲಿಸಿರುವವರ ದಟ್ಟಣೆಯ ಕಾರಣದಿಂದ ಶಹಾಮದಲ್ಲಿ ಎರಡನೇ ಡೇರೆಯನ್ನು ತೆರೆಯಲಾಯಿತು. ಹಿಂದಿನ ದಿನಗಳಲ್ಲಿ ಎಲ್ಲಾ ಅರ್ಜಿದಾದರರನ್ನು ಪರಿಗಣಿಸಲಾಗದ ಕಾರಣ ಹೊಸ ಕೇಂದ್ರ ತೆರೆಯಲಾಗಿದೆ.
ಅಬುಧಾಬಿ ವಸತಿ ಇಲಾಖೆ ವಿಭಾಗದ ಮಾಧ್ಯಮ ಇಲಾಖೆಯ ಮುಖ್ಯಸ್ಥ ಅಬ್ದುಲ್ ಅಝೀಝ್ ಅಲ್ ಮಅ್ಮರಿ ಮಾತನಾಡಿ, ಹೊಸ ಡೇರೆಯು ಒಂದೇ ಸಮಯದಲ್ಲಿ 300 ಜನರಿಗೆ ಸೇವೆ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
15 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಕರೆತರಬೇಕಾಗಿಲ್ಲ ಮತ್ತು ಅವರಿಗಾಗಿ ಪೋಷಕರು ಅರ್ಜಿಗಳನ್ನು ಸಲ್ಲಿಸಿದರೆ ಸಾಕು ಎಂದು ಅವರು ಹೇಳಿದರು. ತೀವ್ರತರವಾದ ಶಾಖದಿಂದ ಮಕ್ಕಳ ಸಂರಕ್ಷಣೆಯ ಭಾಗವಾಗಿ ಈ ನಿರ್ಧಾರ ಎನ್ನಲಾಗಿದೆ.
ಸಾಮೂಹಿಕ ಕ್ಷಮಾಪಣೆ ಮೂಲಕ ಎಕ್ಸಿಟ್ ಪಾಸ್ ಪಡೆಯಲು ಬಯಸುವವರು ಮಾತ್ರ ಶಹಾಮ ಕೇಂದ್ರಕ್ಕೆ ಭೇಟಿ ನೀಡಿದರೆ ಸಾಕು ಎಂದು ವಸತಿ ಖಾತೆ ವ್ಯಕ್ತಪಡಿಸಿದೆ.
ವ್ಯಾಲಿಡಿಟಿ ಇರುವ ಪಾಸ್‌ಪೋರ್ಟ್ ಹೊಂದಿದವರು ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ದಾಖಲೆ ಹೊಂದಿಲ್ಲದವರು ಮತ್ತು ಅವಧಿ ಮುಗಿದವರು ರಾಯಭಾರಿಗಳಿಂದ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಔಟ್ ಪಾಸ್ ಪಡೆದು ಶಹಾಮ ಕೇಂದ್ರಕ್ಕೆ ಆಗಮಿಸಬೇಕು.
ಅಬುಧಾಬಿ ವೀಸಾಗಳಲ್ಲಿ ಇರುವವರು ಮಾತ್ರ ಶಹಾಮ ಕೇಂದ್ರವನ್ನು ಅವಲಂಬಿಸಬಹುದು.
ಇತರ ಎಮಿರೇಟ್‌ನ ವೀಸಾಗಳನ್ನು ಹೊಂದಿದವರು ಆಯಾಯ ಎಮಿರೇಟ್‌ನ ಕೇಂದ್ರಕ್ಕೆ ತಲುಪಬೇಕು ಎಂದು ಅವರು ವಿವರಿಸಿದರು.
ಗಂಟೆಗಳವರೆಗೆ ಕ್ಯೂ ನಿಂತು ಅಧಿಕಾರಿಗಳೊಂದಿಗೆ ವಿವರಿಸುವಾಗ ಅವರು ಇತರ ಎಮಿರೇಟ್‌ನ ವಿಸಾದವರು ಎಂಬುದು ಅರಿವಾಗುವ ಹಲವು ಪ್ರಕರಣ ಕಂಡು ಬಂದಿದೆ.
ಈ ಸನ್ನಿವೇಶವನ್ನು ತಪ್ಪಿಸಲು ರಾಯಭಾರಿ ಕಾರ್ಯಾಚರಣೆಗಳು, ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಯಾಯ ನಾಗರಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಭಾರತ, ಪಾಕಿಸ್ತಾನ, ಚೀನಾ, ಶ್ರೀಲಂಕಾ, ಫಿಲಿಪೈನ್ಸ್ ಮುಂತಾದ ದೇಶಗಳ ದೂತಾವಾಸಗಳ ಪ್ರತ್ಯೇಕ ಸಹಾಯ ಕೇಂದ್ರಗಳು ಸಾರ್ವಜನಿಕ ಕ್ಷಮಾಪಣಾ ಕೇಂದ್ರದಲ್ಲಿ ಪ್ರಾರಂಭಿಸಲಾಗಿವೆ. ನಾಗರಿಕರು ತಮ್ಮ ಕೌಂಟರ್ಗಳನ್ನು ತಲುಪಬಹುದು ಮತ್ತು ಸಹಾಯ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.