ದುಬೈ: ನಕಲಿ ಉತ್ಪನ್ನಗಳ ಮಾರಾಟ ಮಾಡುವ ಉದ್ದೇಶದಿಂದ ತೆರೆಯಲಾದ ಸಾಮಾಜಿಕ ಮಾಧ್ಯಮ ಪೇಜುಗಳ ವಿರುದ್ಧ ಯುಎಇ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆರ್ಥಿಕ ವ್ಯವಹಾರಗಳ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ನಕಲಿ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಉದ್ದೇಶಿಸಿರುವ 5,000 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆರ್ಥಿಕ ವ್ಯವಹಾರ ಇಲಾಖೆ ಲಾಕ್ ಮಾಡಿದೆ.
ಪ್ರಮುಖ ಬ್ರ್ಯಾಂಡ್‌ನ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಫೇಸ್ಬುಕ್ ಸೇರಿದಂತೆ ನವ ಮಾಧ್ಯಮದಲ್ಲಿನ ಖಾತೆಗಳನ್ನು ಅಧಿಕಾರಿಗಳು ಈ ಹಿಂದೆಯೇ ಪತ್ತೆಹಚ್ಚಿದ್ದರು. ಮೂವತ್ಮೂರು ದಶಲಕ್ಷ ಜನರು ಅಂತಹ ನವ ಮಾಧ್ಯಮ ಖಾತೆಗಳನ್ನು ಅನುಸರಿಸುತ್ತಾರೆ.
ನಕಲಿ ಉತ್ಪನ್ನಗಳನ್ನು ಖರೀದಿಸಬಾರದು ಮತ್ತು ನಕಲಿ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವಂತೆ ಆರ್ಥಿಕ ವ್ಯವಹಾರಗಳ ಇಲಾಖೆಯು ಆದೇಶ ನೀಡಿದೆ. ಇದಕ್ಕಾಗಿ ಸಾರ್ವಜನಿಕರು 600545555 ಕರೆ ಮಾಡಬಹುದು.
ಸಾಮಾಜಿಕ ಮಾಧ್ಯಮದ ಮೂಲಕ ನಕಲಿ ಉತ್ಪನ್ನಗಳ ಮಾರಾಟವನ್ನು ನಿರೀಕ್ಷಣೆ ಮಾಡಲು 24 ಗಂಟೆಗಳ ಕಾರ್ಯಾಚರಣೆ ಜಾರಿಗೊಳಿಸಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ತಿಳಿಸಿದೆ.