janadhvani

Kannada Online News Paper

ಎಸ್ಸೆಸ್ಸೆಫ್ ಶಿವಮೊಗ್ಗ ಜಿಲ್ಲಾ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮ

ಶಿವಮೊಗ್ಗ: ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಡಿವಿಷನ್ ಹಾಗೂ ಯುನಿಟ್ ಗಳ ಸಕ್ರೀಯ ಕಾರ್ಯಕರ್ತರ ಟೀಮ್ ಹಸನೈನ್ ಸಂಗಮವು ಎಸ್ಸೆಸ್ಸೆಫ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿದ್ದೀಕ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಮರ್ಕಝ್ ಸಆದ ಶಿವಮೊಗ್ಗದಲ್ಲಿ ನಡೆಯಿತು.ಎಸ್.ವೈ.ಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಯ್ಯಿದ್ ಶಹೀದುದ್ದೀನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಲ್ ಮುಹಮ್ಮದ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ತರಗತಿಯನ್ನು ನಡೆಸಿದರು.ಶಾಹುಲ್ ಹಮೀದ್ ಮುಸ್ಲಿಯಾರ್ ನಗರ ಮುನ್ನುಡಿ ಭಾಷಣಗೈದರು.ಕಾರ್ಯಕ್ರಮದಲ್ಲಿ ಅಬ್ದುಲ್ ಲತೀಫ್ ಸ ಅದಿ ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಶಂಶುದ್ದೀನ್ ಬಿಜವಳ್ಳಿ ಸ್ವಾಗತಿಸಿ,ಕೊನೆಗೆ ವಂದಿಸಿದರು.