ಮಂಜೇಶ್ವರ: ಮಾಣಿ ದಾರುಲ್ ಇರ್ಷಾದ್ ಎಜ್ಯುಕೇಷನಲ್ ಸೆಂಟರ್ ನಲ್ಲಿ ಸುದೀರ್ಘ ಕಾಲ ಮುದರ್ರಿಸರಾಗಿ ಸೇವೆ ಗೈದು ಹಲವಾರು ಉಲಮಾಗಳನ್ನು ಸಮೂಹಕ್ಕೆ ಅರ್ಪಿಸಿ, ಇದೀಗ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಪುಣ್ಯ ಮಕ್ಕ – ಮದೀನಕ್ಕೆ ಯಾತ್ರೆ ಹೊರಟ ಮಚ್ಚಂಪಾಡಿ ಉಮರುಲ್ ಫಾರೂಖ್ ಮದನಿ ಉಸ್ತಾದರಿಗೆ ದಾರುಲ್ ಇರ್ಷಾದ್ ಸ್ಟೂಡೆಂಟ್ಸ್ ಅಸೋಸಿಯೇಷನ್(ದಿಸಾ) ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.ಮಚ್ಚಂಪಾಡಿಯಲ್ಲಿರುವ ಉಸ್ತಾದರ ಮನೆಯಲ್ಲಿ ನಡೆಸಿದ ಪ್ರಸ್ತುತ ಕಾರ್ಯಕ್ರಮದ ನೇತೃತ್ವವನ್ನು ದಾರುಲ್ ಇರ್ಷಾದ್ ಶಿಲ್ಪಿಯೂ, ಕರ್ನಾಟಕ ರಾಜ್ಯ ಸುನ್ನೀ ಜಂ-ಇಯ್ಯತ್ತುಲ್ ಉಲಮಾ ಪ್ರ.ಕಾರ್ಯದರ್ಶಿಯೂ ಆದ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ವಹಿಸಿದರು. ಶೈಖುನಾ ಪುಳಿಕ್ಕೂರು ಇಬ್ರಾಹಿಂ ಫೈಝೀ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಇಸ್ಹಾಖ್ ಫೈಝೀ ಮಚ್ಚಂಪಾಡಿ, ಮುಹಮ್ಮದ್ ಶೆರೀಫ್ ಬಾಖವಿ ಕಾಟಿಪ್ಪಳ್ಳ, ಮುಹಮ್ಮದ್ ಹನೀಪ್ ಮದನಿ ಉಕ್ಕುಡ, ಹಾಜಿ ಅಬ್ದುಲ್ಲತೀಫ್ ಮುಸ್ಲಿಯಾರ್ ಪೆರಿಮಾರ್ ಮೊದಲಾದವರು ಉಪಸ್ಥಿತರಿದ್ದರು. ರಫೀಖ್ ಮದನಿ ಮಚ್ಚಂಪಾಡಿ ಸ್ವಾಗತಿಸಿ, ಮಾಚಾರು ಇಸ್ಮಾಯಿಲ್ ಸಅದಿ ವಂದಿಸಿದರು.
ವರದಿ: ಕೊಂಬಾಳಿ ಝುಹುರಿ
Amiin