janadhvani

Kannada Online News Paper

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು: ಸುರಕ್ಷಿತ ಸ್ಥಳಕ್ಕೆ ಪ್ರಯಾಣಿಸಿದ ನಾಗರಿಕರು

ಈ ವರದಿಯ ಧ್ವನಿಯನ್ನು ಆಲಿಸಿ


ಅಮೇರಿಕ: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ದಿನೇದಿನೇ ವ್ಯಾಪಿಸುತ್ತಿದ್ದು, ಈಗಾಗಲೇ 500ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿರುವುದಾಗಿ ಅಗ್ನಿಶಾಮಕ ದಳ ತಿಳಿಸಿದೆ.

ಶುಕ್ರವಾರ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ, ಇನ್ನೂ 5000 ಕಟ್ಟಡಗಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಒಣ ಹವೆ ಮತ್ತು ಬೀಸುತ್ತಿರುವ ಗಾಳಿಯು ಬೆಂಕಿಯನ್ನು ದೂರದವರೆಗೂ ಹರಡುವಂತೆ ಮಾಡುತ್ತಿದ್ದು, ಕಾಡ್ಗಿಚ್ಚಿನ ಪ್ರಭಾವಕ್ಕೆ ಸಿಲುಕಿರುವ ಮನೆಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕ ಸೃಷ್ಟಿಯಾಗಿದೆ.

ವಾಹನವೊಂದರಲ್ಲಿ ಯಾಂತ್ರಿಕ ಸಮಸ್ಯೆಯಿಂದಾಗಿ ಸೋಮವಾರ ಹೊತ್ತಿಕೊಂಡ ಬೆಂಕಿ, ಒಣ ಮರ, ಕಾಡುಗಳಲ್ಲಿ ಅತಿ ಬೇಗ ವಿಸ್ತರಿಸಿದೆ. ಶಾಸ್ತಾ ಪ್ರಾಂತ್ಯವನ್ನು ದಾಟಿ ಗುರುವಾರ ರಾತ್ರಿ ರೆಡ್ಡಿಂಗ್‌ ನಗರದ ವರೆಗೂ ತಲುಪಿದೆ. ಒಂದೇ ರಾತ್ರಿಯಲ್ಲಿ ಬೆಂಕಿ 194 ಚದರ ಕಿಲೋಮೀಟರ್‌ ಪ್ರದೇಶವನ್ನು ಸುಟ್ಟುಕರಕಲಾಗಿಸಿದೆ.

ಕಾಡ್ಗಿಚ್ಚು ಶವಮನಗೊಳಿಸಲು ಅಗ್ನಿಶಾಮಕ ದಳ ನಿರಂತರ ಪ್ರಯತ್ನದಲ್ಲಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಅಗ್ನಿಶಮನಕ  ಸಿಬ್ಬಂದಿ(ಫೈರ್‌ಫೈಟರ್‌) ಮೃತಪಟ್ಟಿದ್ದಾರೆ. ಬೆಂಕಿಗೆ ಆಹುತಿಯಾಗುವ ಭಯದಲ್ಲಿ ಈಗಾಗಲೇ ಸಾವಿರಾರು ಜನರು ಊರು ತೊರೆದು ಸುರಕ್ಷಿತ ಸ್ಥಳಗಳಗಳತ್ತ ಪ್ರಯಾಣಿಸಿದ್ದಾರೆ.

error: Content is protected !! Not allowed copy content from janadhvani.com