ಮಕ್ಕಾ: ಈ ವರ್ಷದ ಹಜ್ ನಿರ್ವಹಣೆಗಾಗಿ ಸುಮಾರು 185,193 ಲಕ್ಷ ಮಂದಿ ಯಾತ್ರಿಕರು ಫಣ್ಯ ಭೂಮಿ ತಲುಪಿದ್ದಾರೆ.ಮುಂಬರುವ ದಿನಗಳಲ್ಲಿ, ಹಜ್ಜಾಜ್ ಗಳ ಆಗಮನದಿಂದಾಗಿ ಪುಣ್ಯ ನಗರವು ಜನ ನಿಬಿಡಗೊಳ್ಳಲಿದೆ.
278 ವಿಮಾನಗಳ ಮೂಲಕ 54,619, ಯಾತ್ರಿಕರು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ಮೂಲಕ ತಲುಪ್ಪಿದ್ದಾರೆ, ಮದೀನಾದ ಕಿಂಗ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾನದ ಮೂಲಕ 130,574 ಹಜ್ಜಾಜ್‌ಗಳು ಬಂದು ತಲುಪಿದ್ದಾರೆ ಎಂದು ಸೌದಿ ಸಿವಿಲ್ ಏವಿಯೇಷನ್ ತಿಳಿಸಿದೆ.
ಈ ಸಾರಿ ಹೆಚ್ಚಿನ ಸಂಖ್ಯೆಯ ಹಜ್ ಯಾತ್ರಾರ್ಥಿಗಳು ಮದೀನಾ ವಿಮಾನ ನಿಲ್ದಾಣದ ಮೂಲಕ ತಲುಪಿದ್ದಾರೆ. 656 ವಿಮಾನಗಳು ಯಾತ್ರಿಗಳಿಗಾಗಿ ಹಾರಾಟ ನಡೆಸಿತ್ತು.
ಇದೇ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಹಜ್ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಶೇ 28 ರಷ್ಟು ಹೆಚ್ಚಳ ದಾಖಲಿಸಿದೆ.
ಈ ವರ್ಷದ ಮೊದಲ ಯುರೋಪಿಯನ್ ಗುಂಪು 165 ಯಾತ್ರಿಕರನ್ನೊಳಗೊಂಡ ಟರ್ಕಿ ತಂಡವು ಜಿದ್ದಾ ತಲುಪಿದೆ. ಈ ಬಾರಿ ಟರ್ಕಿಯಿಂದ 80,000 ಸಾವಿರ ಯಾತ್ರಿಕರು ಆಗಮಿಸಲಿದ್ದಾರೆ.
ಹಜ್ಜಾಜ್‌ಗಳ ಹೆಚ್ಚಳಕ್ಕೆ ತಕ್ಕಂತೆ ಜಿದ್ದಾದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ.
ಈ ವರ್ಷವೂ ವಿವಿಧ ಸೌದಿ ಇಲಾಖೆಗಳ ಸಹಯೋಗದೊಂದಿಗೆ ಮಲೇಷಿಯಾದಿಂದ ಬರುವ ಹಜ್ ಯಾತ್ರಾರ್ಥಿಗಳಿಗಾಗಿ ಏರ್ಪಡಿಲಾದ “ಮಕ್ಕಾ ರಸ್ತೆ” ಯೋಜನೆಯು ಭಾರೀ ಯಶಸ್ಸನ್ನು ಕಂಡಿದೆ. ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಎಮಿಗ್ರೇಷನ್ ಕಾರ್ಯವಿಧಾನಗಳು ಮತ್ತು ಹಜ್ಜಾಜ್ಗಳ ಇತರ ಪರೀಕ್ಷೆಗಳನ್ನು ಕ್ಷಿಪ್ರವಾಗಿ ಮಾಡಲಾಗುತ್ತದೆ.