ಕುವೈತ್ ಸಿಟಿ: ಇರಾಕಿನ ಆಂತರಿಕ ಕಲಹವು ಕುವೈತ್ ನ ಭದ್ರತೆಗೆ ಬೆದರಿಕೆಯಾಗಿಲ್ಲ ಎಂದು ಸ್ಪೀಕರ್ ಮರ್ಝೂಕ್ ಅಲ್ ಘಾನಿಮ್ ಹೇಳಿದರು. ಕುವೈತ್‌ನ ನೆರೆಯ ಇರಾಕ್ ದೇಶದ ಪ್ರಮುಖ ನಗರಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕುವೈತ್ ಭದ್ರತೆಯನ್ನು ಬಲಪಡಿಸಿದೆ.
ನಿರುದ್ಯೋಗ ಮತ್ತು ಸಾರ್ವಜನಿಕ ಸೇವೆಗಳ ಕೊರತೆ ಇರಾಕ್ ನಲ್ಲಿ ಆಂತರಿಕ ಹೋರಾಟಕ್ಕೆ ಕಾರಣವಾಗಿದೆ ಎಂದು ಕುವೈತ್ ಹೇಳಿದೆ. ಗಡಿ ಪ್ರದೇಶಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಬಸ್ರಾ ಮತ್ತು ಉತ್ತರ ಬಾಗ್ದಾದ್ ಪಟ್ಟಣಗಳಲ್ಲಿ ಗಲಭೆ ಕಿಡಿ ಹೊತ್ತಿಕೊಂಡಿತ್ತು. ಆ ಕಾರಣಕ್ಕಾಗಿ ಕುವೈತ್ ನಾದ್ಯಂತ ಸುರಕ್ಷತೆಯನ್ನು ಬಲಪಡಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಪರಿಸ್ಥಿತಿ ಕುರಿತು ಚರ್ಚಿಸಲು ಸ್ಪೀಕರ್ ಕರೆದ ಸಭೆಯಲ್ಲಿ ಸಂಸದರು ಸಮೇತ ಸೇರಿದವರಿಗೆ ಉತ್ತರಿಸುತ್ತಾ ಸ್ಪೀಕರ್ ಅಲ್ ಘಾನಿಮ್ ಈ ಕುರಿತು ವಿವರಿಸಿದರು.
ಇರಾಕ್‌ನ ನಜಫ್‌ಗೆ ವಿಮಾನಯಾನವನ್ನು ಕುವೈತ್ ಏರ್ವೇಸ್ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಇರಾಕ್‌ನ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಆದರೆ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಸ್ಥಿಕೆ ಅವಶ್ಯವಾದ ಕಾರಣ ಅಂತಹ ಸನ್ನಿವೇಶದಲ್ಲಿ ವಿವರವನ್ನು ತಿಳಿಸಲಾಗುವುದು ಎಂದು ಅವರು ಹೇಳಿದರು. ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದರು.
ಏತನ್ಮಧ್ಯೆ, ಇರಾಕ್ ನ ಆಂತರಿಕ ಸುರಕ್ಷೆಯು ಹತ್ತಿರದ ನೆರೆಯ ದೇಶದವಾದ ಕುವೈತ್‌ಗೆ ಪ್ರಮುಖ ವಿಷಯವಾಗಿದೆ ಎಂದು ಸಂಪುಟ ವ್ಯವಹಾರಗಳ ಸಚಿವ, ಕುವೈತ್‌ನ ಉಪ ಪ್ರಧಾನಿ ಅನಸ್ ಅಲ್ ಸಾಲೆಹ್ ಘೋಷಿಸಿದ್ದಾರೆ.