ಜುಬೈಲ್:(ಜನಧ್ವನಿ ವಾರ್ತೆ) ಜುಬೈಲ್ ಶೋಲ ಸಮೀಪ ಸುಮಾರು 6 ತಿಂಗಳಿನಿಂದ ಕೆಲಸದಿಂದ ವಂಚಿತರಾಗಿ ಸುಮಾರು 14 ಜನ ನೇಪಾಳಿಯರು ಸಣ್ಞ ರೂಮ್ ಒಂದರಲ್ಲಿ ತಿನ್ನಲು ಆಹಾರ ಇಲ್ಲದೆ ಹಾಗೂ AC ಇಲ್ಲದೆ ಹೊರಾಂಡದಲ್ಲಿ ಮಲಗಿರುವುದು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜುಬೈಲ್ ಶೋಲ ಘಟಕದ ಸದಸ್ಯರ ಗಮನಕ್ಕೆ ಬಂದಿತ್ತು.
ತಕ್ಷಣವೇ ಇವರ ಕಷ್ಟಕ್ಕೆ ಸ್ಪಧಿಸಿದ KCF ಜುಬೈಲ್ ಶೋಲ ಘಟಕದ ಸದಸ್ಯರು ಅವರಿಗೆ AC ನೀಡಿ ಹಾಗೂ ಕಂಪೆನಿ ಯೊಂದರಲ್ಲಿ ಸುಮಾರು 6 ಜನರಿಗೆ ಕೆಲಸ ನೀಡುವಲ್ಲಿ ಯಶಸ್ವಿಯಾದರು.
ಇಂದು ಅವರನ್ನು ಭೇಟಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜುಬೈಲ್ ಶೋಲ ಘಟಕದ ನಾಯಕರು ಅವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನೇಪಾಳಿ ಸಹೋದರರು ಕರ್ನಾಟಕ*ಕಲ್ಚರಲ್ ಫೌಂಡೇಶನ್ KCF
ಜುಬೈಲ್ ಶೋಲ ಘಟಕಕ್ಕೆ ಕೃತಜ್ಞತೆ ಹೇಳಿದರ
KCF ಶೋಲ ಯುನಿಟ್ ಪ್ರಧಾನ ಕಾರ್ಯದರ್ಶಿ ಮುಸ್ತಫ ಕುದ್ರಡ್ಕ,ಎಜುಕೇಶನ್ ವಿಂಗ್ ನಾಯಕರಾದ GMS ಶರೀಫ್ ಗಾಣೆಮಾರ್ ಹಾಗೂ ಬದ್ರುದ್ದೀನ್ ಅಮ್ಮುಂಜೆ, ಪಬ್ಲಿಷಿಂಗ್ ವಿಂಗ್ ನಾಯಕರಾದ ಸುಲೈಮಾನ್ ಮಾಚಾರ್ ಹಾಗೂ ಫಝಲ್ ಮಂಗಳೂರುರವರು ಅವರಿಗೆ ಸಾಂತ್ವನ ಹೇಳಿದರು.