janadhvani

Kannada Online News Paper

ಸೌದಿ: ಮಹಿಳೆಯರಿಗೆ ಪರವಾನಗಿ-30 ಸಾವಿರ ವಿದೇಶೀ ಚಾಲಕರಿಗೆ ಉದ್ಯೋಗ ನಷ್ಟ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಹಿಳಯರಿಗೆ ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದ ಬಳಿಕ ಗೃಹ ಚಾಲಕರ ನೇಮಕಾತಿಯು ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಆರು ತಿಂಗಳಲ್ಲಿ 30,000 ಕ್ಕಿಂತಲೂ ಹೆಚ್ಚಿನ ವಿದೇಶಿ ಚಾಲಕರನ್ನು ತಮ್ಮ ತಾಯ್ನಾಡಿಗೆ  ಕಳುಹಿಸಲಾಗಿದೆ ಎಂದು ಜನರಲ್ ಸ್ಟ್ಯಾಟಿಸ್ಟಿಕ್ಸ್ ಅಥಾರಿಟಿ ಕೂಡಾ ಹೇಳಿಕೊಂಡಿದೆ.
ಸೌದಿ ಅರೇಬಿಯಾದಲ್ಲಿ ಸ್ವದೇಶೀಕರಣ ಶಕ್ತವಾಗತೊಡಗಿದ ನಂತರ ದೈನಂದಿನ ಸರಾಸರಿ 2,602 ಅನಿವಾಸಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಎರಡು ವಾರಗಳ ಹಿಂದೆ ಮಹಿಳೆಯರು ವಾಹನ ಚಲಾಯಿಸಲು  ಆರಂಭಿಸಿದರು. ಈ ಮಧ್ಯೆ, ಹೌಸ್ ಡ್ರೈವರ್ ನೇಮಕಾತಿಯು 25 ಶೇಕಡಾ ಕುಸಿಯಿತು. ಮುಂದಿನ ವರ್ಷ 50% ಕ್ಕಿಂತ ಹೆಚ್ಚು ಕುಸಿಯಬಹುದು ಎಂದು ರಿಕ್ರೂಟ್ಮೆಂಟ್ ವಲಯದವರಿಂದ ಕೇಳಿಬರುತ್ತಿದೆ.

ಮನೆ ಚಾಲಕರಲ್ಲಿ ಹೆಚ್ಚಿನವರು ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಿಂದ ನೇಮಕಗೊಂಡವರಾಗಿದ್ದಾರೆ.ಸೌದಿ ಅರೇಬಿಯಾದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಭಾರತೀಯ ಚಾಲಕರಿದ್ದಾರೆ ಎಂದು ಅಂದಾಜಿಸಲಾಗಿದೆ.ಮುಂದಿನ ಎರಡು ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಿ ಸುಮಾರು 40 ಶೇಕಡಾ ವಿದೇಶಿ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಮಹಿಳೆಯರು ವಾಹನ ಚಾಲನೆ ಮಾಡಲು ತೊಡಗಿರುವುದರಿಂದ ಕುಟುಂಬದ ಖರ್ಚುಗಳನ್ನು ಕಡಿಮೆ ಮಾಡಲು ಮತ್ತು ವಿದೇಶಕ್ಕೆ ಕಳುಹಿಸಲಾಗುವ ಹಣದ ಹರಿವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಚೇಂಬರ್ಸ್ ಆಫ್ ಕಾಮೆರ್ಸ್‌ನ ಮಾಜಿ ಅಧ್ಯಕ್ಷ ಡಾ. ಸಾಮಿ ಅಬ್ದುಲ್ ಕರೀಂ ಹೇಳಿದರು.

ದೇಶದಲ್ಲಿ 1.36 ಲಕ್ಷ ಮನೆ ಚಾಲಕರು ಇದ್ದಾರೆ. ಈ ವರ್ಷ ಮಾರ್ಚ್ ವರೆಗಿನ ಅಂಕಿಅಂಶಗಳ ಪ್ರಕಾರ 7,500 ಮನೆ ಚಾಲಕರು ತಿಂಗಳಲ್ಲಿ ಎಕ್ಸಿಟ್ ಹೊಡೆದು ನಿರ್ಗಮಿಸುತ್ತಿದ್ದಾರೆ ಎಂದು ಜನರಲ್ ಸ್ಟ್ಯಾಟಿಸ್ಟಿಕ್ಸ್ ಪ್ರಾಧಿಕಾರ ತಿಳಿಸಿದೆ.

ಅದೇ ವೇಳೆ ಸೌದಿ ಅರೇಬಿಯಾದಲ್ಲಿ, ದೇಶೀಕರಣ ಜಾರಿಗೆ ತಂದಿರುವ ಹೊರತಾಗಿಯೂ,ಪ್ರತೀ ತಿಂಗಳು 35,000 ವಿದೇಶಿ ಕಾರ್ಮಿಕರನ್ನು ನೇಮಕ ಮಾಡಲಾಗುತ್ತದೆ. ಈ ವರ್ಷದ ಮೊದಲ ಅರ್ಧದ ಅಂಕಿಅಂಶಗಳ ಪ್ರಕಾರ, ಕಾರ್ಮಿಕ ಸಚಿವಾಲಯವು 1.06 ಲಕ್ಷ ಉದ್ಯೋಗ ವೀಸಾಗಳನ್ನು ಜಾರಿಗೊಳಿಸಿದೆ.

ದೇಶೀಕರಣದ ಜೊತೆಗೆ, ಲೆವಿಯನ್ನು ಜಾರಿಗೆ ತಂದ ಕಾರಣ ದೇಶವನ್ನು ತೊರೆಯುವ ವಿದೇಶಿಯರ ಸಂಖ್ಯೆಯು  ಹೆಚ್ಚಾಗಿದ್ದವು. ಆದಾಗ್ಯೂ, ಹೊಸ ವೀಸಾದಲ್ಲಿ ಉದ್ಯೋಗ ಕಂಡುಕೊಂಡ ವಿದೇಶಿ ನೌಕರರ ಸಂಖ್ಯೆ ಇಳಿಮುಖವಾಗಲಿಲ್ಲ ಎಂದು ಸಾಮಾಜಿಕ ಮತ್ತು ಅಭಿವೃದ್ಧಿ ಸಚಿವಾಲಯ ಹೇಳಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಖಾಸಗಿ ವಲಯಕ್ಕೆ1,05,900 ವಿದೇಶಿಗಳನ್ನು ಮತ್ತು ಸರಕಾರಿ ವಲಯಕ್ಕೆ 14,352 ಅನಿವಾಸಿಯರನ್ನು ನೇಮಕ ಮಾಡಲು ಅನುಮತಿಸಲಾಗಿದೆ.

ಖಾಸಗಿ ವಲಯದಲ್ಲಿ 24 ಶೇಕಡಾ ವಿದೇಶಿ ನೌಕರರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.ಈ ಪೈಕಿ ಕೇವಲ 2.21 ಲಕ್ಷ ಸ್ವದೇಶಿಗಳು ಮಾತ್ರ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಏತನ್ಮಧ್ಯೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಅರ್ಧದಲ್ಲಿ ಸ್ಥಳೀಯರ ನಿರುದ್ಯೋಗ ದರವು ಶೇ 12.9 ಕ್ಕೆ ಏರಿದೆ.

60 ವರ್ಷ ವಯಸ್ಸು ದಾಟಿದ ಸುಮಾರು 3.20 ಲಕ್ಷ ಅನಿವಾಸಿಗರು ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ, 1,15,800 ಜನರು 65 ವರ್ಷ ವಯಸ್ಸು ದಾಟಿದವರಾಗಿದ್ದಾರೆ ಎಂದು ಜನರಲ್ ಸ್ಟಾಟಿಸ್ಟಿಕ್ಸ್ ಅಥಾರಿಟಿ ವ್ಯಕ್ತ ಪಡಿಸಿದೆ.

error: Content is protected !! Not allowed copy content from janadhvani.com