ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಇದರ ಮಕ್ಕಾ ವಲಯದ ಅಧೀನಕ್ಕೊಳಪಟ್ಟ ತಬೂಕ್ ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 9 ಎಪ್ರಿಲ್ 2026 ಗುರುವಾರ ರಾತ್ರಿ 11 ಗಂಟೆಗೆ ಸರಿಯಾಗಿ ಇಸ್ತಿರಾಹ್ ಇಖ್ವಾನ್ ನಲ್ಲಿ ನೆರವೇರಿತು.
ಉಸ್ತಾದ್ ಅಬೂಬಕ್ಕರ್ ಸಖಾಫಿ ರವರ ದುಆ ದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.


ನೂರುಲ್ ಹುದಾ ಮದ್ರಸ ವಿದ್ಯಾರ್ಥಿ ತುಲ್ಹಾ ಉಮರ್ ಖಿರಾಅತ್ ಪಠಿಸಿದರು.
ಉಸ್ತಾದ್ ಅಬ್ದುರ್ರಹ್ಮಾನ್ ದಾರಿಮಿ ರವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಾದ ಜನಾಬ್ ಅಶ್ರಫ್ ಪಳ್ಳಿಪ್ಪಾಡಿ ವಹಿಸಿದ್ದರು.
ಕಾರ್ಯದರ್ಶಿ ಜನಾಬ್ ಜುನೈದ್ ಅಡ್ಡೂರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರ ಪಡೆದರು.
ಉಸ್ತಾದ್ ಹೈದರಾಲಿ ನಈಮಿ
ಹಿತವಚನ ನೀಡಿದರು. ಡಿಕೆಯಸ್ಸಿ ಕೇಂದ್ರ ಸಮಿತಿ ಆರ್ಗನೈಝರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ಸಂಘಟನೆಯ ರೂಪರೇಖೆಯನ್ನು ಅಚ್ಚುಕಟ್ಟಾಗಿ ವಿವರಿಸಿದರು.ಡಿಕೆಯಸ್ಸಿ ಹಿತೈಷಿ ಅಬ್ದುಲ್ ಮಜೀದ್ ವಿಟ್ಲರವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಿದರು.

2026-27 ನೇ ಸಾಲಿನ ನೂತನ ಸಮಿತಿ
ಅಧ್ಯಕ್ಷ: ಉಸ್ತಾದ್ ಅಬ್ದುರ್ರಹ್ಮಾನ್ ದಾರಿಮಿ (ತಬೂಕು ದಾರಿಮಿ)
ಪ್ರಧಾನ ಕಾರ್ಯದರ್ಶಿ:
ಜನಾಬ್ ಮೋನು ದೊಂಪ
ಹಣಕಾಸು ಕಾರ್ಯದರ್ಶಿ: ಜನಾಬ್ ಅಶ್ರಫ್ ಪಳ್ಳಿಪ್ಪಾಡಿ
ಸಂವಹನ ಕಾರ್ಯದರ್ಶಿ: ಜನಾಬ್ ಶಫೀಖ್ ಪೆರಾಡಿ
ಡೆವಲಪ್ ಮೆಂಟ್ ಚೆಯರ್ಮ್ಯಾನ್: ಉಮರ್ ವಳಚ್ಚಿಲ್
ಉಪಾಧ್ಯಕ್ಷರು:
1. ಶೇಖ್ ಅಬ್ದುರ್ರಹ್ಮಾನ್ ಪಲ್ಲಿಪಾಡಿ
2. ಅಬ್ದುಲ್ ಜಬ್ಬಾರ್ ಬಜ್ಪೆ
ಕಾರ್ಯದರ್ಶಿಗಳು:
1. ಜುನೈದ್ ಅಡ್ಡೂರು
2. ಇಮ್ರಾನ್ ಪಳ್ಳಿಪ್ಪಾಡಿ
ಮುಖ್ಯ ಸಲಹೆಗಾರರು:
ಉಸ್ತಾದ್ ಹೈದರ್ ನಈಮೀ
ಲೆಕ್ಕ ಪರಿಶೋಧಕ:
ಜನಾಬ್ ಅಬ್ದುಲ್ ಮಜೀದ್ ವಿಟ್ಲ
ಕಾರ್ಯಕಾರಿ ಸಮಿತಿ ಸದಸ್ಯರು:
ಅಝರ್ ಸುರತ್ಕಲ್
ಹನೀಫ್ ಬಿ.ಸಿ.ರೋಡ್
ಅಬ್ದುಲ್ ಹಮೀದ್ ಮಡಿಕೇರಿ
ಅಬ್ದುಲ್ ಲತೀಫ್ ಎಮ್ಮಾಡಿ
ಮಲಿಕ್ ಪಳ್ಳಿಪ್ಪಾಡಿ
ಅಲ್ತಾಫ್ ವಳಚ್ಚಿಲ್
ಡಿಕೆಯಸ್ಸಿ ತಬೂಕ್ ಘಟಕದ ಯಶಸ್ವಿಗಾಗಿ ಆಹೋರಾತ್ರಿ ದುಡಿದು ಇದೀಗ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ತಾಯ್ನಾಡಿಗೆ ಕುಟುಂಬ ಸಮೇತ ಮರಳುತ್ತಿರುವ ಜನಾಬ್ ಅಬ್ದುಲ್ ವಹ್ಹಾಬ್ ವಳಚ್ಚಿಲ್ ರವರನ್ನು ಶಾಲು ಹೊದಿಸಿ ಬೀಳ್ಕೊಡಲಾಯಿತು.
ತಬೂಕ್ ಘಟಕದ ಸದಸ್ಯ ನಮ್ಮನ್ನಗಲಿದ ಮರ್ಹೂಂ ಅಶ್ರಫ್ ಉಪ್ಪಿನಂಗಡಿ ಹೆಸರಲ್ಲಿ ಗಾಯಿಬೇ ಜನಾಝ ನಮಾಝ್ ನಿರ್ವಹಿಸಿ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಪ್ರಾರ್ಥಿಸಲಾಯಿತು.
ಡಿಕೆಯಸ್ಸಿ ಮಕ್ಕತುಲ್ ಮುಕರ್ರಮ ಆರ್ಗನೈಝರ್ ಉಸ್ತಾದ್ ಅಶ್ರಫ್ ಸಖಾಫಿ ಕುಂಬಕೋಡ್ ಸ್ವಾಗತಿಸಿ, ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಣೆಗೈದರು. ಸ್ವಲಾತುನ್ನಬಿ (ಸ) ಯೊಂದಿಗೆ ಸಭೆ ಮುಕ್ತಾಯಗೊಂಡಿತು.
ವರದಿ: ವಹಬ್ ವಳಚ್ಚಿಲ್















ಇನ್ನಷ್ಟು ಸುದ್ದಿಗಳು
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ
ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್
ಡಿಕೆಎಸ್ಸಿ ಅಲ್-ಖೋಬರ್ ಘಟಕ: ಮಾಸಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನ
ಗಲ್ಫ್ ಕನಸಿನ ಕರಾಳ ಮುಖ: ಪ್ರತಿದಿನ 20ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಮೃತ್ಯು – ಒಂದು ವಿಶೇಷ ವರದಿ