ದಮ್ಮಾಂ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ವಲಯ ಅಧೀನದ ಅಲ್-ಖೋಬರ್ ಘಟಕದ ಮಾಸಿಕ ಸಭೆಯು ದಿನಾಂಕ 3, ಎಪ್ರಿಲ್ 2026ರಂದು ಶುಕ್ರವಾರ ಜುಮ್ಅ ನಮಾಝಿನ ಬಳಿಕ ಅತ್ಯಂತ ಯಶಸ್ವಿಯಾಗಿ ಜರುಗಿತು.


ಘಟಕದ ಅಧ್ಯಕ್ಷರಾದ ಉಸ್ಮಾನ್ ಹೊಸಂಗಡಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಮಾಜಿ ಅಧ್ಯಕ್ಷರಾದ ಇರ್ಶಾದ್ ಅಬ್ದುರ್ರಹ್ಮಾನ್ ಪಾಣಾಜೆ ಅವರು ಸೂರಃ ಫಾತಿಹ ಪಾರಾಯಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡೆವಲಪ್ಮೆಂಟ್ ಚೆಯರ್ಮ್ಯಾನ್ ಅಬ್ದುಲ್ ಜಬ್ಬಾರ್ ಕೂರ್ನಡ್ಕ ಅವರು ಸಭೆಗೆ ಆಗಮಿಸಿದ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು ಅವರು ಕಳೆದ ತಿಂಗಳ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಹಣಕಾಸು ಕಾರ್ಯದರ್ಶಿ ಅಶ್ರಫ್ ಚಿಕ್ಕಮಗಳೂರು ಅವರು ಪ್ರವರ್ತನಾ ವರದಿಯನ್ನು ಮಂಡಿಸಿ ಸಭೆಯ ಅಂಗೀಕಾರ ಪಡೆದರು.
ಪವಿತ್ರ ರಮಳಾನ್ ಮಾಸದಲ್ಲಿ ಸಂಘಟನೆಯ ಏಳಿಗೆಗಾಗಿ ಶ್ರಮಿಸಿದ ಸರ್ವರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಡಿಕೆಯಸ್ಸಿ ಖಾದಿಂ ಅವರು ದುಆ ನೆರವೇರಿಸಿದರು.

ಗೌರವಾರ್ಪಣೆ ಮತ್ತು ಸನ್ಮಾನ:
ಸಂಘಟನೆಯ ಏಳಿಗೆಗಾಗಿ ಶ್ರಮಿಸಿದ ಇಬ್ಬರು ಗಣ್ಯರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು:
- ಜನಾಬ್ ಅಬ್ದುಲ್ ಹಮೀದ್ ಮೂಡಿಗೆರೆ (ಮಾಜಿ ಅಧ್ಯಕ್ಷರು, ಡಿಕೆಯಸ್ಸಿ ಅಲ್ ಖೋಬರ್ ಘಟಕ).
- ಜನಾಬ್ ಬಶೀರ್ ಬಾಲುಪೇಟೆ (ವಕೀಲರು ಹಾಗೂ ಮಲೆನಾಡು ಗಲ್ಫ್ ಟ್ರಸ್ಟ್ (MGT) ಸಂಸ್ಥಾಪಕ ಅಧ್ಯಕ್ಷರು).
ಇಸ್ಮಾಯೀಲ್ ಕಾಟಿಪಳ್ಳ ಅವರು ಸನ್ಮಾನಿತರ ಕಿರು ಪರಿಚಯ ಮಾಡಿಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣ್ಯರು, ಡಿಕೆಯಸ್ಸಿಯ ಪ್ರಸಕ್ತ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು ಹಾಗೂ ಮುಂದಿನ ದಿನಗಳಲ್ಲಿ ಸಂಘಟನೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಕೆಯಸ್ಸಿ ಕೇಂದ್ರ ಸಮಿತಿ ಸಹ ಹಣಕಾಸು ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ಸದಸ್ಯರಾದ ಮುಹಮ್ಮದ್ ಹನೀಫ್ ಬಜ್ಪೆ, ಇಮ್ರಾನ್ ಹೊನ್ನಾವರ, ಅಬ್ಬುಂಞ ಮುಕ್ವೆ, ಹಸನ್ ಮುಕ್ವೆ ಹಾಗೂ ಅಬ್ದುರ್ರಝ್ಝಾಖ್ ಕಂಬಳಬೆಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅಶ್ರಫ್ ನಾವುಂದ ಅವರು ಧನ್ಯವಾದ ಸಮರ್ಪಿಸಿದರು.
























All the Best! Congrats