janadhvani

Kannada Online News Paper

ಸೌದಿ: ವಿಸಿಟ್ ವೀಸಾ ಆನ್‌ಲೈನ್ ನವೀಕರಣ ಸ್ಥಗಿತ- ‘ತವಾಸುಲ್’ ಮೂಲಕ ವಿಸ್ತರಣೆಗೆ ಅವಕಾಶ

ಇತ್ತೀಚಿನ ವರದಿಗಳ ಪ್ರಕಾರ, ತವಾಸುಲ್ ಮೂಲಕ ಅರ್ಜಿ ಸಲ್ಲಿಸಿದವರ ವೀಸಾ ಅವಧಿಯನ್ನು ಏಪ್ರಿಲ್ 18 ರವರೆಗೆ ವಿಸ್ತರಿಸಲಾಗುತ್ತಿದೆ. ಹಿಂದೆ ಅರ್ಜಿ ಸಲ್ಲಿಸಿದವರಿಗೆ ಏಪ್ರಿಲ್ 3 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು.

ರಿಯಾದ್: ಸೌದಿ ಅರೇಬಿಯಾದಲ್ಲಿ ಭೇಟಿ ವೀಸಾ (Visit Visa) ಸೇರಿದಂತೆ ವಿವಿಧ ವೀಸಾ ಸಂಬಂಧಿತ ಸೇವೆಗಳು ಆನ್‌ಲೈನ್‌ನಲ್ಲಿ ತಾಂತ್ರಿಕ ಕಾರಣಗಳಿಂದ ಪೂರ್ಣಗೊಳ್ಳದಿದ್ದರೆ, ಇನ್ನು ಮುಂದೆ ವಲಸಿಗರು ಆತಂಕಪಡುವ ಅಥವಾ ಜವಾಝಾತ್ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲ. ಅಬಶಿರ್ ಪೋರ್ಟಲ್‌ನಲ್ಲಿರುವ ‘ತವಾಸುಲ್’ (Tawasul) ಸೇವೆಯು ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಒದಗಿಸುತ್ತಿದೆ.
ಏನಿದು ತವಾಸುಲ್ ಸೇವೆ?
ಸಾಮಾನ್ಯವಾಗಿ ಅಬ್ಶಿರ್ ಮೂಲಕ ವೀಸಾ ನವೀಕರಿಸುವಾಗ ಕೆಲವು ತಾಂತ್ರಿಕ ದೋಷಗಳು (Errors) ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ವ್ಯವಹಾರಗಳನ್ನು ಪೂರ್ಣಗೊಳಿಸಲು ವಲಸಿಗರಿಗೆ ಈ ‘ತವಾಸುಲ್’ ವೇದಿಕೆಯು ಡಿಜಿಟಲ್ ಕೌಂಟರ್ ಆಗಿ ಕೆಲಸ ಮಾಡುತ್ತದೆ. ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಲು ಇದು ಅವಕಾಶ ನೀಡುತ್ತದೆ.

ಅರ್ಜಿ ಸಲ್ಲಿಸುವ ಹಂತಗಳು:
ಅಬಶಿರ್ ಪ್ಲಾಟ್‌ಫಾರ್ಮ್ ಮೂಲಕ ತವಾಸುಲ್ ಸೇವೆಯನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ನಿಮ್ಮ ಅಬಶಿರ್ (Absher) ಖಾತೆಗೆ ಲಾಗಿನ್ ಆಗಿ.
  • ಮೆನುವಿನಲ್ಲಿ ‘My Services’ ಆಯ್ಕೆಯನ್ನು ಆರಿಸಿ.
  • ನಂತರ ‘Passports’ ವಿಭಾಗವನ್ನು ಕ್ಲಿಕ್ ಮಾಡಿ.
  • ಅಲ್ಲಿ ಕಾಣಿಸುವ ‘Tawasul’ ಸೇವೆಯನ್ನು ಆಯ್ಕೆ ಮಾಡಿ.
  • ಹೊಸ ವಿನಂತಿ (Submit a New Request): ಈ ಬಟನ್ ಮೇಲೆ ಕ್ಲಿಕ್ ಮಾಡಿ.
  • ವಿವರಗಳನ್ನು ಭರ್ತಿ ಮಾಡಿ: ಸಂಬಂಧಿತ ಇಲಾಖೆ (Department) ಮತ್ತು ಉಪ-ಸೇವೆಯನ್ನು (Sub-service) ಆಯ್ಕೆ ಮಾಡಿ.
  • ದಾಖಲೆಗಳನ್ನು ಲಗತ್ತಿಸಿ: ಸಮಸ್ಯೆಯ ವಿವರಣೆಯನ್ನು ಬರೆದು, ಅಗತ್ಯವಿರುವ ದಾಖಲೆಗಳನ್ನು (ಅಬಶಿರ್‌ನಲ್ಲಿ ವೀಸಾ ನವೀಕರಿಸಲು ಪ್ರಯತ್ನಿಸಿದಾಗ ಬರುವ ‘error’ ಸಂದೇಶದ ಸ್ಕ್ರೀನ್‌ಶಾಟ್, ವೀಸಾ ಅವಧಿಗೆ ಅನುಗುಣವಾಗಿ ಪಾವತಿಸಿದ ವಿಮೆಯ ಪ್ರತಿ, ವೀಸಾ ನವೀಕರಣಕ್ಕಾಗಿ ಪಾವತಿಸಿದ 100 ರಿಯಾಲ್ ಶುಲ್ಕದ ರಶೀದಿ) ಅಪ್‌ಲೋಡ್ ಮಾಡಿ.
  • (Submit): ಕೊನೆಯದಾಗಿ ನಿಮ್ಮ ವಿನಂತಿಯನ್ನು ಸಬ್ಮಿಟ್ ಮಾಡಿ. ಮೊದಲು ‘ಅರ್ಜಿ ಸ್ವೀಕರಿಸಲಾಗಿದೆ’ ಎಂಬ ಸಂದೇಶ ಬರುತ್ತದೆ. ತದನಂತರ ಜವಾಝಾತ್ ಪರಿಶೀಲಿಸಿ ವೀಸಾ ಅವಧಿಯನ್ನು ವಿಸ್ತರಿಸಿದ ಬಗ್ಗೆ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ.

ವಲಸಿಗರಿಗೆ ನೆಮ್ಮದಿ
ಪ್ರಸ್ತುತ ಭೇಟಿ ವೀಸಾ ನವೀಕರಣದಲ್ಲಿ ಸಮಸ್ಯೆ ಎದುರಿಸುತ್ತಿರುವ ಅನೇಕ ಕುಟುಂಬಗಳಿಗೆ ಈ ಸೇವೆ ವರದಾನವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ತವಾಸುಲ್ ಮೂಲಕ ಅರ್ಜಿ ಸಲ್ಲಿಸಿದವರ ವೀಸಾ ಅವಧಿಯನ್ನು ಏಪ್ರಿಲ್ 18 ರವರೆಗೆ ವಿಸ್ತರಿಸಲಾಗುತ್ತಿದೆ. ಹಿಂದೆ ತವಾಸುಲ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಏಪ್ರಿಲ್ 3 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು. ವೀಸಾ ಅವಧಿ ಮುಗಿಯುವ ಮುನ್ನವೇ ಈ ಕ್ರಮ ಕೈಗೊಳ್ಳುವುದರಿಂದ ಭಾರಿ ದಂಡ ಮತ್ತು ಕಾನೂನು ಕ್ರಮಗಳಿಂದ ಪಾರಾಗಬಹುದು.
ಗಮನಿಸಿ: ಈ ಸೇವೆಯು ಕೇವಲ ಅಬ್ಶಿರ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಯಾವುದೇ ಅನಧಿಕೃತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ.

ಪ್ರಸ್ತುತ ಪ್ರಾದೇಶಿಕ ಸಂಘರ್ಷದ ಪರಿಸ್ಥಿತಿಯಿದ್ದರೂ, ಸೌದಿ ಸರ್ಕಾರವು ವೀಸಾ ಅವಧಿಯ ಬಗ್ಗೆ ಯಾವುದೇ ವಿಶೇಷ ರಿಯಾಯಿತಿಗಳನ್ನು ಘೋಷಿಸಿಲ್ಲ. ವಿಮಾನ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ವೀಸಾ ನವೀಕರಣ ಸಾಧ್ಯವಾಗದವರು ಲಭ್ಯವಿರುವ ವಿಮಾನಗಳ ಮೂಲಕ ಸಕಾಲದಲ್ಲಿ ದೇಶ ತೊರೆಯುವುದು ಸುರಕ್ಷಿತ.

ಸಲಹೆ: ನಿಮ್ಮ ವೀಸಾ ಅವಧಿ ಮುಗಿಯುವ ಕನಿಷ್ಠ 7 ದಿನಗಳ ಮೊದಲೇ ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿ.