ದುಬೈ: ಏಷ್ಯನ್ ರಾಷ್ಟ್ರಗಳಲ್ಲಿನ ಕರೆನ್ಸಿ ಮತ್ತು ಬಂಗಾರದ ಬೆಲೆ ಕುಸಿತವು ಗಲ್ಫ್‌ನಲ್ಲಿ ನೆಲೆಸಿರುವ ಅನಿವಾಸಿಗರ ನಿದ್ರೆ ಕೆಡಿಸಿದೆ. ಊರಿಗೆ ಹಣ ಕಳುಹಿಸಬೇಕೇ ಅಥವಾ ಬಂಗಾರ ಖರೀದಿಸಬೇಕೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಬಂಗಾರಕ್ಕೆ 6ಶೇಕಡಾ ಕುಸಿತವು ಪ್ರಸಕ್ತ ವರ್ಷದಲ್ಲಿ ಕಂಡು ಬಂದಿದೆ.ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ಕರೆನ್ಸಿಗಳ ಮೌಲ್ಯವು ಬಾರೀ ಕುಸಿತವನ್ನೂ ಕಂಡಿದೆ.
ಒಂದು ದಿರ್ಹಂಗೆ 18.70 ಭಾರತೀಯ ರೂಪಾಯಿ ಲಭಿಸುವ ಅವಸ್ಥೆ ಕೂಡ ಕಂಡುಬಂದಿದ್ದು, ಈ ರೀತಿ ಕುಸಿತವು ಬಂಗಾರ ಮಾರಾಟದಲ್ಲಿ ಪ್ರಭಾವ ಬೀರಲಿದೆ ಎಂದು ಸ್ಕೈ ಜುವೆಲ್ಲರಿಯ ನಿರ್ವಾಹಕ ಸಿರಿಯಕ್ ವರ್ಗೀಸ್ ಹೆಳಿದ್ದಾರೆ. ಅದೇ ವೇಳೆ ಮೌಲ್ಯ ವರ್ಧಿತ ಸೇವೆಯು ಮತ್ತೊಂದು ಸವಾಲಾಗಿ ಪರಿಣಮಿಸಿದೆ.
22 ಕ್ಯಾರೆಟ್ ಬಂಗಾರ ಪ್ರತೀ ಗ್ರಾಂಗೆ 142 ದಿರ್ಹಂ ಕ್ರಯವಿದೆ. ಕಳೆದ ವರ್ಷ ಇದು 150 ದಿರ್ಹಂ ಆಗಿತ್ತು. ಶುಕ್ರವಾರ ದಿನಗಳಲ್ಲಿ ಭಾರೀ ಮಾರಾಟ ನಡೆಯುತ್ತಿರುವುದಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಡೈರೆಕ್ಟರ್ ಕೆ.ಪಿ. ಅಬ್ದುಸ್ಸಲಾಂ ಹೇಳಿದರು. ಬಂಗಾರ ಮತ್ತು ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಂಭವವಿದೆ ಎಂದು ಅನುಮಾನಿಸಲಾಗಿದ್ದು, ಆದರೆ ಅದು ತಾತ್ಕಾಲಿಕವಾಗಿದ್ದು, ದಿಢೀರನೆ ಏರುವ ಸಂಭವವೂ ಇದೆ ಎನ್ನಲಾಗಿದೆ.