janadhvani

Kannada Online News Paper

ಯುಎಇ: ಕೇರಳದ ಹಣ್ಣು, ತರಕಾರಿಗಳ ಆಮದು ನಿಷೇಧಕ್ಕೆ ತೆರೆ

ದುಬೈ: ಕೇರಳದಿಂದ ಅಮದು ಮಾಡಲಾಗುತ್ತಿದ್ದ ಹಣ್ಣು ಮತ್ತು ತರಕಾರಿಗಳ ಮೇಲಿನ ನಿಷೇಧವನ್ನು ಯುಎಇ ಹಿಂತೆಗೆದು ಕೊಂಡಿದೆ.ನಿಪ್ಹಾ ವೈರಸ್ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಆದರೂ, ಪರಿಸರ ಸಚಿವಾಲಯವು ಕೇರಳದ ಸರಕುಗಳಲ್ಲಿ ವೈರಸ್ ಮುಕ್ತ ಎನ್ನುವ ಸಾಕ್ಷ್ಯ ಪತ್ರ ಕಡ್ಡಾಯ ಎಂದು ಸಚಿವಾಲಯ ಹೇಳಿದೆ. ಮೇ 25 ರಿಂದ ಕೇರಳದಿಂದ ಆಮದು ನಿಷೇಧವನ್ನು ಹೇರಲಾಗಿತ್ತು.

ನಿಪ್ಹಾ ವ್ಯಾಪಕವಾಗಿದ್ದ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಘಟನೆ ನೀಡಿದ ಎಚ್ಚರಿಕೆಯ ಆಧಾರದ ಮೇಲೆ ಯುಎಇ ಮತ್ತು ಇತರ ಗಲ್ಫ್ ರಾಷ್ಟ್ರಗಳು ಕೇರಳದ ಆಹಾರ ಉತ್ಪನ್ನಗಳಿಗೆ ನಿಷೇಧ ಹೇರಿತ್ತು.ಕೊಲ್ಲಿಯಲ್ಲಿ ತರಕಾರಿ ಮಾರುಕಟ್ಟೆಯ ಪ್ರಮುಖ ಪಾಲನ್ನು ಹೊಂದಿರುವ ಕೇರಳದ ರಫ್ತಿನ ಮೇಲಿನ ನಿಷೇಧವು ಅನೇಕ ಆಹಾರ ಪದಾರ್ಥಗಳ ಅಭಾವ ಉಂಟಾಗಿತ್ತು. ದೊಡ್ಡ ಹೈಪರ್ಮಾರ್ಕೆಟ್‌ಗಳು ಇತರ ದೇಶಗಳಿಂದ ಪರ್ಯಾಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡು ಕೊಂಡಿತ್ತು.

ರಫ್ತು ನಿಷೇಧವನ್ನು ಹಿಂಪಡೆದು ಕೊಂಡಿರುವ ಹೊಸ ಕಾನೂನು ರಫ್ತು ಮಾಡುವ ವ್ಯಾಪಾರಿಗಳು ಮತ್ತು ರೈತರಲ್ಲಿ ಉತ್ಸಾಹ ಮೂಡಿಸಿದೆ.

error: Content is protected !! Not allowed copy content from janadhvani.com