ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಜುಬೈಲ್ ಘಟಕದ ಮಹಾಸಭೆಯು ದಿನಾಂಕ 30, ಜನವರಿ 2026 ಶುಕ್ರವಾರ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೃಷ್ಣಾಪುರ ಅವರ ಅಧ್ಯಕ್ಷತೆಯಲ್ಲಿ ಜುಬೈಲ್ ನಲ್ಲಿ ಜರಗಿತು.


ಜಾಫರ್ ಮುಂಡ್ಕೂರ್ ವಾರ್ಷಿಕ ವರದಿಯನ್ನು ಹಾಗೂ ಹಣಕಾಸು ಕಾರ್ಯದರ್ಶಿ ಅನ್ವರ್ ಪಡುಬಿದ್ರಿ ಯವರು ಪ್ರವರ್ತನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು. ಡಿಕೆಯಸ್ಸಿ ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತ್ರತ್ವದಲ್ಲಿ 2026-27 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.


ಮುಸ್ತಫಾ ಮೈನ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅನ್ವರ್ ಪಡುಬಿದ್ರಿ ಮತ್ತು ಜಾಫರ್ ಮುಂಡ್ಕೂರ್ ,ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಶ್ತಾಖ್ ಮಜ್ವಾನ ,ಕಾರ್ಯದರ್ಶಿಗಳಾಗಿ ಅಬ್ದುಲ್ ಹಕೀಮ್ ನೆಕ್ಕರೆ ,ಉಬೈದ್ ಸುರಿಬೈಲ್ ಮತ್ತು ಯಹ್ಯಾ ಕೆಸಿ ರೊಡ್ ರವರನ್ನು ,ಮತ್ತು ಹಣಕಾಸು ಕಾರ್ಯದರ್ಶಿ ಯಾಗಿ ಶಮೀರ್ ಪಲಿಮಾರ್ , ಸಮಿತಿಯ ಅಭಿವೃದ್ಧಿ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಕೃಷ್ಣಾಪುರ ಮತ್ತು ಸಂವಹನ ಕಾರ್ಯದರ್ಶಿಯಾಗಿ ಅಶ್ರಫ್ ನಾಳ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು.
ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಅಬ್ದುರ್ರಶೀದ್ ಸಅದಿ ದುಆ ನೆರವೇರಿಸಿದರು. ಡಿಕೆಯಸ್ಸಿ ದಮ್ಮಾಂ ವಲಯ ಆರ್ಗನೈಝರ್ ಝುಬೈರ್ ಸಖಾಫಿ ಯವರು ಖಿರಾಅತ್ ಪಠಿಸಿದರು. ಅನ್ವರ್ ಪಡುಬಿದ್ರಿ ಸ್ವಾಗತಿಸಿದರು.
ಈ ಕೆಳಗಿನ ಸದಸ್ಯರನ್ನು ಪ್ರಧಾನ ಸಲಹೆಗಾರನ್ನಾಗಿ ನೇಮಿಸಲಾಯಿತು .
ಕೆ ಎಚ್. ರಫೀಖ್ ಸೂರಿಂಜೆ
ಸುಲೈಮಾನ್ ಮಿಲನ್ ಸೂರಿಂಜೆ
ಅಬ್ದುಲ್ ಹಮೀದ್ ಉಳ್ಳಾಲ್
ಅಬ್ದುಲ್ ಹಮೀದ್ ಕಾಪು
ಅಬ್ದುಲ್ ಕರೀಂ ಪಾಣೆಮಂಗಳೂರು
ಹಾತಿಂ ಕೂಳೂರು
ಅಬೂಬಕ್ಕರ್ ಬರ್ವ
ಇಖ್ಬಾಲ್ ಮಲ್ಲೂರ್.
ಕೊನೆಯಲ್ಲಿ ಶಾಫಿ ಶುಐಬ್ ವಂದಿಸಿದರು .
DKSC ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ದಮ್ಮಾಮ್ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಉಸ್ಮಾನ್ ಹೊಸಂಗಡಿ, ಜುಬೈಲ್ ಯೂತ್ ವಿಂಗ್ ಸಾಮಿತ್ ಪಡುಬಿದ್ರಿ, ದಮ್ಮಾಂ ಘಟಕ ಅಧ್ಯಕ್ಷ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ತುಖ್ಬ ಘಟಕದ ಅಧ್ಯಕ್ಷ ಜೆಪ್ಪು ಮುಹಮ್ಮದ್ ಹನೀಫ್ ಸಭೆಯಲ್ಲಿ ಉಪಸ್ಥಿತರಿದ್ದರು .
ಡಿಕೆಯಸ್ಸಿ ದಮ್ಮಾಂ, ಅಲ್ ಖೋಬರ್, ತುಖ್ಬ, ಜುಬೈಲ್, ಫ್ಯಾಮಿಲಿ ಮುಲಾಖಾತ್ ಸಮಿತಿ ಮತ್ತು ಜುಬೈಲ್ ಯೂತ್ ವಿಂಗ್ ಘಟಕದ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.







