ರಿಯಾದ್: ಜಾಗತಿಕವಾಗಿ ಎಚ್ಚರಿಕೆ ನೀಡಲಾಗಿರುವ ಆಪ್ಟಾಮಿಲ್ ಫಾರ್ಮುಲಾ ಹಾಲಿನ ಬ್ಯಾಚ್‌ಗಳು ಸೌದಿ ಮಾರುಕಟ್ಟೆಯನ್ನು ತಲುಪಿಲ್ಲ ಎಂದು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ದೃಢಪಡಿಸಿದೆ. ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಪ್ರಸ್ತುತ ಲಭ್ಯವಿರುವ ಆಪ್ಟಾಮಿಲ್ ಉತ್ಪನ್ನಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಮಕ್ಕಳಿಗಾಗಿ ಉತ್ಪಾದಿಸುವ ಆಹಾರ ಮತ್ತು ಉತ್ಪನ್ನಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಾಗಿ ಮತ್ತು ಯಾವುದೇ ಉಲ್ಲಂಘನೆ ಅಥವಾ ಸುರಕ್ಷತಾ ಲೋಪ ಕಂಡುಬಂದರೆ ತಕ್ಷಣದ ನಿಯಂತ್ರಕ ಕ್ರಮ ಕೈಗೊಳ್ಳುವುದಾಗಿ ಪ್ರಾಧಿಕಾರ ವಿವರಿಸಿದೆ. ಕೆಲವು ವಿದೇಶ ರಾಷ್ಟ್ರಗಳಲ್ಲಿ ಉತ್ಪನ್ನದ ಕುರಿತು ಎಚ್ಚರಿಕೆಗಳು ಬಂದ ಹಿನ್ನೆಲೆಯಲ್ಲಿ “X” ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ವಿಚಾರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ವಿವರಣೆ ನೀಡಲಾಗಿದೆ.


