ಮಲಪ್ಪುರಂ: ಮಲಪ್ಪುರಂನ ಆತವನಾಡ್ ನಲ್ಲಿ ಹಾಡಹಗಲೇ ಸರ ಕದ್ದ ಯುವಕನನ್ನು ಬಂಧಿಸಲಾಗಿದೆ. ಎಸ್ ಐಆರ್ ನ ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಮಹಿಳೆಯ ವೇಷ ಧರಿಸಿ ಬಂದ ಯುವಕನೊಬ್ಬ ಈ ಕಳ್ಳತನ ಮಾಡಿದ್ದಾನೆ. ಬಂಧಿತ ವ್ಯಕ್ತಿಯನ್ನು ಪೂಳಮಂಗಲಂ ಮೂಲದ ಝಾಕಿರ್ (33) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಕರಿಂಗಪ್ಪಾರದಲ್ಲಿರುವ ಹಂಝ ಹಾಜಿ ಅವರ ಮನೆಯಲ್ಲಾಗಿತ್ತು ದರೋಡೆ. ಸೀರೆ ಧರಿಸಿ ಬಂದ ಝಾಕಿರ್, ಹಂಝ ಹಾಜಿ ಅವರ ಪತ್ನಿ ನಫೀಸಾ ಅವರಲ್ಲಿ ಎಸ್.ಐ.ಆರ್ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿ. ಆಧಾರ್ ಕಾರ್ಡ್ ಕೇಳಿದ್ದಾನೆ.
ಆಧಾರ್ ಕಾರ್ಡ್ ತರಲು ನಫೀಸಾ ಮನೆಯೊಳಗೆ ಹೋದ ಸಂದರ್ಭದಲ್ಲಿ,ಝಾಕಿರ್ ಕೂಡ ಮನೆಗೆ ನುಗ್ಗಿ ನಫೀಸಾ ಮೇಲೆ ಹಲ್ಲೆ ನಡೆಸಿ ಅವರ ಚಿನ್ನದ ಹಾರವನ್ನು ಕಿತ್ತು ಪರಾರಿಯಾಗಿದ್ದಾನೆ. ದಾಳಿಯಲ್ಲಿ ನಫೀಸಾ ಅವರ ಕುತ್ತಿಗೆಗೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.


