ಸುಳ್ಯ: ಇಕ್ರಾಮುಸ್ಸುನ್ನ ಎರಡನೇ ಬಿರುದುದಾನ ಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ 42ನೇ ವಾರ್ಷಿಕ ಸಮಾರಂಭವು ಎಲಿಮಲೆ ಮಸೀದಿ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ಸಮಾಪ್ತಿಗೊಂಡಿತು.
ಸೈಯಿದ್ ಮುಹ್ಸಿನ್ ತಂಙಳ್ ರವರು ನಡೆಸುಕೊಂಡು ಬರುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಹಾಗೂ ಯುವಕರ ಸಂಘಟನೆಯಾದ ನುಸ್ರತ್ ಜಂಟಿಯಾಗಿ ದಿನಾಂಕ 29 ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ವಿವಿಧ ರೀತಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ 30 ರ ಶುಕ್ರವಾರ ಸಂಜೆಯವರೆಗೆ ನಡೆಯಿತು.


ಎಲಿಮಲೆ ತಂಙಳ್ ರವರ ಪಿತಾಮಹರ ಆಂಡ್ ನೇರ್ಚೆ, ಮಹಿಳೆಯರಿಗಾಗಿ ವಿಶೇಷ ತರಗತಿ, ಬೃಹತ್ ಬುರ್ದಾ ಮಜ್ಲಿಸ್, ನಅತ್ ಶರೀಫ್, ಸಾರ್ವಜನಿಕರಿಗಾಗಿ ಮೆಡ್ ಲ್ಯಾಂಡ್ ಅಸ್ಪತ್ರೆಯ ಸಹಯೋಗದೊಂದಿಗೆ ಉಚಿತ ವೈಧ್ಯಕೀಯ ಶಿಬಿರ, ಗಲ್ಫ್ ಮೀಟ್, ಹಳೆ ವಿಧ್ಯಾರ್ಥಿಗಳ ಅಲುಮ್ನಿ ಮೀಟ್, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕರ್ಮಗಳು ನಡೆದವು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸೈಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ರವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ನೇತೃತ್ವ ಸೈಯಿದ್ ಮುಹ್ಸಿನ್ ತಂಙಳ್ ಕುಂಜಿಲಂ (ಎಲಿಮಲೆ ತಂಙಳ್) ವಹಿಸಿದರು. ಪ್ರಖ್ಯಾತ ವಾಗ್ಮಿ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿಯವರು ಮುಖ್ಯ ಪ್ರಭಾಷಣವನ್ನು ಮಾಡಿದರು.
ಸೈಯಿದ್ ಕುಂಞಿಕೋಯ ತಂಙಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಸ್ತಫಾ ಪೂಕೋಯ ತಂಙಳ್ ಮಂಬಾಡ್ ಅತಿಥಿಗಳಾಗಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸೈಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ಬಿರುದುದಾರಿಗಳಿಗೆ ಬಿರುದನ್ನು ನೀಡಿ ದುಆ ಆಧ್ಯಾತ್ಮಿಕ ಮಜ್ಲಿಸಿಗೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಯು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ ,
ಸ್ಥಳೀಯ ಮುದರಿಸ್ ಹಾರಿಸ್ ಸಖಾಫಿ ಅಲ್ ಸುರೈಜಿ,
ಹಾಫಿಳ್ ಹಾಶಿರ್ ಹಿಮಮಿ ಸಖಾಫಿ, ಜೀರ್ಮುಖಿ ಇಮಾಮ್ ಅಬ್ದುಲ್ ಜಲೀಲ್ ಮುಈನಿ ,
ಅಬೂಬಕರ್ ಸಿದ್ದಿಕ್ ಹಿಮಮಿ ಹಾಜಿ ಅಬ್ದುಲ್ಲ ಕಟ್ಟೆಕಾರ್,ಸುಳ್ಯದ ಯುವ ಉದ್ಯಮಿ ಫೈಸಲ್ ಕಟ್ಟೆ ಕಾರ್,
ಅರಂತೋಡು ಜುಮಾ ಮಸೀದಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ, ಗುತ್ತಿಗಾರು ಜಮಾತ್ ಅಧ್ಯಕ್ಷ ಅಬ್ದುಲ್ ಖಾದರ್ ವಳಲಂಬೆ, ದುಗ್ಗಲಡ್ಕ ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಕೊಳಂಜಿ ಕೋಡಿ, ಹಸೈನಾರ್ ವಳಲಂಬೆ, ಪೈಜಾರು ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ, ಇಕ್ರಮುಸ್ಸುನ್ನ ಮಾಜಿ ಮುದರಿಸರಾದ ಅಬೂಬಕರ್ ಸಕಾಫಿ ವಿಟ್ಲ, ಅನಸ್ ಅಝ್ಹರಿ, ಪಂಜ ನೆಕ್ಕಿಲ ಮುದರಿಸ್ ಝಿಯಾದ್ ಸಖಾಫಿ, ಜುನೈದ್ ಸಖಾಫಿ ಜೀರ್ಮುಕ್ಕಿ, ಜಿಸಿಸಿ ಅಧ್ಯಕ್ಷ ಸಿದ್ದೀಕ್ ಅಮ್ಜದಿ, ಅಶ್ರಫ್ ಸಖಾಫಿ ಮುದರ್ರಿಸ್ ಗಾಂಧಿನಗರ ಸುಳ್ಯ,
ಜಮಾತ್ ಮಾಜಿ ಅಧ್ಯಕ್ಷರುಗಳಾದ ಮೂಸ ಹಾಜಿ, ಸುಳ್ಯ ತಾಲೂಕು ಮುಸ್ಲಿಂ ಯುವ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಶಾಫಿ ಕುತ್ತ ಮೊಟ್ಟೆ,
ಜೀರ್ಮುಖಿ ಮಸೀದಿ ಅಧ್ಯಕ್ಷರಾದ ಹಸನ್ ಹಲ್ಲಡ್ಕ, ತರಬಿಯತ್ ಅಧ್ಯಕ್ಷ ಲತೀಫ್ ಕ್ವಾಲಿಟಿ, ದ ಟ ಜಿಲ್ಲ ಸಮಿತಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮೊಗರ್ಪಣೆ, ಜಮಾತ್ ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಖಿ, ಆಲಿ ಹಾಜಿ ಕಲ್ಲು ಗುಂಡಿ, ಹನೀ ಫ್ ಪೈಚಾರ್, ಹಮೀದ್ ಬಾಕಿಲ, ಹಂಸ ದೊಡ್ಡ ತೋಟ,
ಅಶ್ರಫ್ ಹಾಜಿ ಸೂರತ್ಕಲ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು, ಸೂಫಿ ಎಲಿಮಲೆ ಸ್ವಾಗತಿಸಿ ಅಶ್ರಫ್ ಜಿ ಎ ಕೆ ವಂಧಿಸಿದರು..
ಕಾರ್ಯಕ್ರಮದ ಪ್ರಯುಕ್ತ ಎರಡು ದಿನಗಳಲ್ಲಿ ಅನ್ನದಾನವು ನೆರವೇರಿತು


