ಉಳ್ತೂರು ; ಇಂದು ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಮರ್ಹೂಂ ಮುಹಮ್ಮದ್ ಫಾಳಿಲಿ ಅನುಸ್ಮರಣೆಯು ಫೆಬ್ರವರಿ 1 ರಂದು ಜಮಾಅತ್ ಅಧ್ಯಕ್ಷರಾದ ಕೆ.ಎಚ್ ಅಝೀಝುದ್ದೀನ್ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ರವರು ದುಆಶೀರ್ವಚನ ನೀಡಲಿದ್ದು, ಉಳ್ತೂರು ಉಳ್ತೂರು ಮುಹಮ್ಮದ್ ತೌಸೀಫ್ ಸಅದಿ ಹರೇಕಳ ರವರು ದಿಕ್ಸೂಚಿ ಭಾಷಣ ಮಾಡುವರು. ಉಸ್ತಾದ್ ಐ.ಎಂ.ಉಮರ್ ಅಹ್ಸನಿ ಇನೋಳಿ ಸಭೆಯನ್ನು ಉದ್ಘಾಟಿಸಲಿದ್ದು, ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟ್ಟಪಡವು ಮುಖ್ಯ ಭಾಷಣ ಮಾಡಲಿದ್ದಾರೆ. ಇನ್ನಿತರ ಸಾಮಾಜಿಕ- ಸಾಮುದಾಯಿಕ ನಾಯಕರು ಭಾಗವಹಿಸಲಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮುಈನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


