janadhvani

Kannada Online News Paper

ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯಾ: ಸಮಿತಿಯ ಮುಖಂಡರಿಂದ ಸ್ಪೀಕರ್ ಯು.ಟಿ. ಖಾದರ್ ಭೇಟಿ

ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಯ ಆರಂಭಿಕ ಹಂತವಾದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ, ಸಂಸ್ಥೆಯ ಐದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿವಿಧ ವೈದ್ಯಕೀಯ ಸೇವಾ ಕಾರ್ಯಕ್ರಮಗಳ ಅನಾವರಣ ಕಾರ್ಯಕ್ರಮವು 2026 ಏಪ್ರಿಲ್ 5 ನೇ ತಾರೀಕು ಆದಿತ್ಯವಾರ ನಡೆಯಲಿದೆ.

ಉಳ್ಳಾಲ,ಜ.25: ಕಿನ್ಯಾ ಗ್ರಾಮದ ಕೇಂದ್ರ ಜುಮಾ ಮಸೀದಿಯ ಸನಿಹದಲ್ಲೇ ಯಶಸ್ವಿ ಕಾರ್ಯಾಚರಣೆಯೊಂದಿಗೆ ಮುನ್ನುಗ್ಗುತ್ತಿರುವ “ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ)”(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ) ಇದರ ನಾಯಕರು ಇಂದು ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಸನ್ಮಾನ್ಯ ಡಾ| ಯು.ಟಿ.ಖಾದರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.

ಸಂಸ್ಥೆಯ ಸ್ವಂತ ನಿವೇಶನದಲ್ಲಿ ಚಾರಿಟಿ ಆರೋಗ್ಯ ಕೇಂದ್ರ ಒಂದನ್ನು ಸ್ಥಾಪಿಸುವ ಸಲುವಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಯ ಆರಂಭಿಕ ಹಂತವಾದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ, ಸಂಸ್ಥೆಯ ಐದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿವಿಧ ವೈದ್ಯಕೀಯ ಸೇವಾ ಕಾರ್ಯಕ್ರಮಗಳ ಅನಾವರಣ ಕಾರ್ಯಕ್ರಮವು 2026 ಏಪ್ರಿಲ್ 5 ನೇ ತಾರೀಕು ಆದಿತ್ಯವಾರ
ನಡೆಯಲಿದೆ. ಸಂಸ್ಥೆಯ ಮಟ್ಟಿಗೆ ಅತ್ಯಂತ ಮಹತ್ತರವಾದ ಈ ಕಾರ್ಯಕ್ರಮಕ್ಕೆ
ಕರ್ನಾಟಕ ರಾಜ್ಯ ವಿಧಾನಸಭೆಯ ಘನವೆತ್ತ ಸ್ಪೀಕರ್ ಸನ್ಮಾನ್ಯ ಡಾ. ಯು. ಟಿ. ಖಾದರ್ ಸರ್
ರವರನ್ನು ಆಹ್ವಾನಿಸಲಾಯಿತು.

ಸನ್ಮಾನ್ಯ ಸ್ಪೀಕರ್ ರವರು ಸಂಸ್ಥೆಯ ಆರೋಗ್ಯ ಮತ್ತು ವೈದ್ಯಕೀಯ ಸೇವಾ ಚಟುವಟಿಕೆಗಳ ಕಳೆದ ಐದು ವರ್ಷಗಳ ವಿವರಗಳನ್ನು ಪಡೆದು ಅತೀವ ಸಂತೋಷವನ್ನು ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ತನ್ನ ವತಿಯಿಂದ ಹಲವು ವೈದ್ಯಕೀಯ ಯೋಜನೆಗಳನ್ನು ತಮ್ಮ ಸಂಸ್ಥೆಯ ಮೂಲಕ ಮಾಡಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮೂಸಾ ಅಬ್ಬಾಸ್ ಕುರಿಯಕ್ಕಾರ್, ಖಜಾಂಜಿಯವರಾದ ಹಾಜಿ ಅಬೂಬಕರ್ ಕಲ್ಲಾಂಡ, ಕಾರ್ಯದರ್ಶಿ ಅಬ್ದುಲ್ ಸಮದ್ ಕಿನ್ಯ, ಸಂಸ್ಥೆಯ ಸಂಚಾಲಕರಾದ
ಹಾಜಿ ಇಸ್ಮಾಯಿಲ್ ಪರಮಾಂಡ, ಜನಾಬ್ ಹಮೀದ್ ಕಿನ್ಯ, ಹಾಜಿ ಅಬ್ಬಾಸ್ ಫಿರೋಝ್ ಕಿನ್ಯ ಹಾಗೂ ಸಂಸ್ಥೆಯ ಸದಸ್ಯರಾದ ಜನಾಬ್ PSK ಇಬ್ರಾಹಿಂ ಪಾಲ್ಗೊಂಡಿದ್ದರು.