ಬೆಂಗಳೂರು:(ಜನಧ್ವನಿ ವಾರ್ತೆ) ಮುಸ್ಲಿಮರಿಗೆ ನೀಡಲಾಗಿರುವ ಒಬಿಸಿ ಮಾನ್ಯತೆಯನ್ನು ರದ್ದುಗೊಳಿಸಬೇಕೆಂಬ ಪ್ರವೀಣ್ ತೊಗಾಡಿಯಾರ ಹೇಳಿಕೆಗೆ ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಖಂಡನೆ ವ್ಯಕ್ತಪಡಿಸಿದ್ದಾರೆ.
ತಾನೇ ಕಟ್ಟಿಬೆಳಿಸಿರುವ ಸಂಘಟೆಯಲ್ಲೇ ಮಾನ್ಯತೆ ಕಳೆದುಕೊಂಡು ಮೂಲೆಗುಂಪಾಗಿರುವ ವ್ಯಕ್ತಿಯು ನಿಗದಿತ ಸಮುದಾಯವೊಂದರ ಮಾನ್ಯತೆಯ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದು ಅವರು ಅಭಿಪ್ರಾಯಿಸಿದ್ದಾರೆ. ಒಬಿಸಿ ಸವಲತ್ತುಗಳು ಸಮರ್ಪಕವಾಗಿ ಸದ್ಳಳಕೆಯಾಗುತ್ತಿಲ್ಲ. ಆದುದರಿಂದಲೇ ಇಂದಿಗೂ ಮುಸ್ಲಿಮರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಹಿಂದಳಿದಿರುವವರನ್ನು ಮುಂದೆ ತರಬೇಕಾದುದು ಸರಕಾರಗಳ ಕರ್ತವ್ಯವಾಗಿದೆ.
ಮುಸ್ಲಿಮರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಭಿಕ್ಷೆಯಲ್ಲ. ಅದು ನ್ಯಾಯಬದ್ಧವಾಗಿದೆ. ಮುಸ್ಲಿಮರ ಜನ ಸಂಖ್ಯೆಯಿಂದಾಗಲೀ, ಸರಕಾರವು ಮುಸ್ಲಿಮರಿಗೆ ಸವಲತ್ತು ಕೊಟ್ಟ ಕಾರಣದಿಂದಾಗಲೀ ದೇಶದ ಯಾವುದೇ ಇತರ ಸಮುದಾಯಕ್ಕೆ ತೊಂದರೆಯಾಗಿಲ್ಲ. ಆದುದರಿಂದ ಜನರ ತೆರಿಗೆ ಹಣದಿಂದ ಮುಸ್ಲಿಮರು ಬದುಕುತ್ತಿದ್ದಾರೆ ಎಂಬರ್ಥದಲ್ಲಿ ತೋಗಾಡಿಯರಂಥವರು ಮಾಡುವ ಪ್ರಚಾರಗಳಿಗೆ ಯಾವುದೇ ಸಮುದಾಯದವರು ಬಲಿಯಾಗಬಾರದು ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.
yes correct