ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು SSF ಜಿಲ್ಲಾ ಕಛೇರಿ ಆರ್ ಟಿ ನಗರದಲ್ಲಿ ಜಿಲ್ಲಾ ಅಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವು ಅಬೂಬಕ್ಕರ್ ಅಹ್ಶನಿ ಉಸ್ತಾದರ ದುಆ ದೊಂದಿಗೆ ಚಾಲನೆಗೊಂಡು, ಕೆ.ಎಂ.ಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸ ಅದಿ ಕಿನ್ಯ ಉದ್ಘಾಟಿಸಿದರು. ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷರಾದ ಅನಸ್ ಸಿದ್ದೀಖಿ ತರಗತಿ ನಡೆಸಿದರು.

ರಾಜ್ಯಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಸ್ವಭಾಹ್ ಸಖಾಫಿ ಕೌನ್ಸಿಲ್ ಗೆ ನೇತೃತ್ವ ನೀಡಿದರು.
ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಹೈದರ್ ಎಲೆಕ್ಟ್ರಾನಿಕ್ಸ್ ಸಿಟಿ ವಾರ್ಷಿಕ ವರದಿಯನ್ನೂ, ಕೋಶಾಧಿಕಾರಿ ಮುಸ್ತಾಕ್ ಅಹ್ಮದ್ ಲೆಕ್ಕಪತ್ರವನ್ನು ಮಂಡಿಸಿದರು.
ಬಳಿಕ ರಸೂಲ್ ಸಿಸಿ, ಅಬ್ದುಲ್ ವಾಜಿದ್ ಅಂಜದಿ ರೈಂಬೋ, ಸುಹೈಲ್ ಕುತುಬಿ ಕ್ಯೂಡಿ ,ಸಂಶುದ್ದೀನ್ ಜೆ.ಪಿ ನಗರ ಮೀಡಿಯಾ , ಹಬೀಬ್ ಸಖಾಫಿ ದಅವಾ, ನಿಝಾರ್ ಖಾದ್ರಿ ಕ್ಯಾಂಪಸ್ , ಶಂಸು ಗಾಂಜಾಲ್ ವೆಫಿ , ನೌಶಾದ್ ಪಬ್ಲಿಕೇಶನ್ ವರದಿಯನ್ನು ವಾಚಿಸಿದರು.
ಸೆಯ್ಯದ್ ಮಿಸಹಬ್ ಹೈದ್ರೋಸಿ ತಂಗಳ್ ಹಾಗೂ ರಾಜ್ಯ ರೈಂನ್ಬೊ ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸಿ ಸಿ ಕಾರ್ಯದರ್ಶಿ ರಸೂಲ್ ಸ್ವಾಗತಿಸಿ ,ವೆಫಿ ಕಾರ್ಯದರ್ಶಿ ಶಂಸು ಗಾಂಜಾಲ್ ಧನ್ಯವಾದವಿತ್ತರು.


