janadhvani

Kannada Online News Paper

ಸೌದಿ: ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ- ನಿರ್ಮಾಣ ಕಾರ್ಯ 92% ಪೂರ್ಣ

12 ಬೋರ್ಡಿಂಗ್ ಗೇಟ್‌ಗಳು, 10 ಏರ್ ಕ್ರಾಫ್ಟ್ ಬ್ರಿಡ್ಜುಗಳು , 32 ಚೆಕ್-ಇನ್ ಕೌಂಟರ್‌ಗಳು, ಎಂಟು  ಸೆಲ್ಫ್ ಸರ್ವೀಸ್ ಕಿಯೋಸ್ಕ್‌ಗಳು ಮತ್ತು 2,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಗಳು ಸಹ ಇರಲಿವೆ.

ಜಿಝಾನ್: ಹೊಸ ಜಿಝಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಪ್ರಗತಿಯನ್ನು ಮತ್ತು ಸ್ಥಳದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಜಿಝಾನ್ ಪ್ರದೇಶದ ಗವರ್ನರ್ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ಅಝೀಝ್ ಬಿನ್ ಮುಹಮ್ಮದ್ ಬಿನ್ ಅಬ್ದುಲ್ಅಝೀಝ್ ಅವರು ಪರಿಶೀಲಿಸಿದ್ದಾರೆ.

ವಿಮಾನ ನಿಲ್ದಾಣವು ನಿರ್ಮಾಣ ಕಾಮಗಾರಿಯು 92% ಪೂರ್ಣಗೊಂಡಿದ್ದು, ವಾರ್ಷಿಕವಾಗಿ 5.4 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಅನುಭವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉನ್ನತ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಮಿಸಲಾದ ಆಧುನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಇದು ಒಳಗೊಂಡಿರುತ್ತದೆ.

ಸರಿಸುಮಾರು 48 ಮಿಲಿಯನ್ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ವಿಮಾನ ನಿಲ್ದಾಣವು 57,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮುಖ್ಯ ಪ್ರಯಾಣಿಕರ ಟರ್ಮಿನಲ್ ಅನ್ನು ಒಳಗೊಂಡಿದೆ.

12 ಬೋರ್ಡಿಂಗ್ ಗೇಟ್‌ಗಳು, 10 ಏರ್ ಕ್ರಾಫ್ಟ್ ಬ್ರಿಡ್ಜುಗಳು , 32 ಚೆಕ್-ಇನ್ ಕೌಂಟರ್‌ಗಳು, ಎಂಟು ಸೆಲ್ಫ್ ಸರ್ವೀಸ್ ಕಿಯೋಸ್ಕ್‌ಗಳು ಮತ್ತು 2,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಗಳು ಸಹ ಇರಲಿವೆ.

ನಾಲ್ಕು ವೈಟಿಂಗ್ ಲಾಂಚ್ ಗಳು, ಗಂಟೆಗೆ 2,400 ಲಗೇಜುಗಳನ್ನು ಸಾಗಿಸಬಹುದಾದ ಸ್ಮಾರ್ಟ್ ಹ್ಯಾಂಡ್ಲಿಂಗ್ ವ್ಯವಸ್ಥೆಯನ್ನು ಹೊಂದಿರುವ ನಾಲ್ಕು ಬ್ಯಾಗೇಜ್ ಬೆಲ್ಟ್‌ಗಳು ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.