ಹವ್ವಾ ಫೌಂಡೇಶನ್ ಕಾಟಿಪಳ್ಳ ಇದರ ಜಿಸಿಸಿ ಎರಡನೇ ವಾರ್ಷಿಕ ಸಭೆ ಜುಬೈಲ್ ನಲ್ಲಿ ದಿನಾಂಕ 9, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಸಂಘದ ಅಧ್ಯಕ್ಷ ಸುಲೈಮಾನ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ಸೇರಿದ ಕುಟುಂಬ ಸದಸ್ಯರನ್ನು ಅಬ್ದುಲ್ ಗಫೂರ್ ಸ್ವಾಗತಿಸಿದರು ಹಾಗೂ ನಮ್ಮ ಕುಟುಂಬದ ಹಿರಿಯ ಸದಸ್ಯ ಹಸನ್ ಬಾವಾ ರಿಯಾದ್ ಇವರು ಪವಿತ್ರ ಖುರ್ ಆನ್ ಪಠಿಸುವ ಮೂಲಕ ಸಭೆ ಪ್ರಾರಂಭ ವಾಯಿತು.

2024- 2025 ನೇ ವಾರ್ಷಿಕ ವರದಿ ವಾಚನ ರಿಝ್ವಾನ್ ರವರು ಮತ್ತು ಪ್ರವರ್ತನಾ ವರದಿಯನ್ನು ಅಧ್ಯಕ್ಷ ಸುಲೈಮಾನ್ ರವರು ಮಂಡಿಸಿದರು.
ನಮ್ಮ ಸಂಸ್ಥೆ ಮಾಡಿದ ಸಾಧನೆ ಸಭೆಯಲ್ಲಿ ಸೇರಿದ ಸದಸ್ಯರಿಗೆ ಅರಿವು ಮೂಡಿಸುವ ಮೂಲಕ ಸೇರಿದ ಸದಸ್ಯರನ್ನು ಹುರಿ ತುಂಬಿಸಿದರು. ನಾವು ಕಳೆದೆರಡು ವರ್ಷದಲ್ಲಿ ಹೆಚ್ಚಿನ ಪ್ರವರ್ತನೆ ಮಾಡಿದರ ಸಂಕೇತವಾಗಿ ಸರ್ವ ಸದಸ್ಯರ ಮುಖದಲ್ಲಿ ಸಂತೋಷದ ಚಿಹ್ನೆ ಎದ್ದು ಕಾಣುತ್ತಿತ್ತು. ಇದಕ್ಕಾಗಿ ಸಹಾಯ ಸಹಕಾರ ನೀಡಿದ ಸದಸ್ಯರಿಗೆ ಅಧ್ಯಕ್ಷ ಸುಲೈಮಾನ್ ರವರು ಧನ್ಯವಾದಗಳನ್ನು ಅರ್ಪಿಸಿದರು.
ಕುಟುಂಬ ಬಂದವನ್ನು ಗಟ್ಟಿ ಗೊಳಿಸ ಬೇಕು ನಮ್ಮ ಕುಟುಂಬ ಸದಸ್ಯರ ಕಷ್ಟ ಸುಖಕ್ಕೆ ಸ್ಪಂದಿಸದೆ ಇದ್ದರೆ ಕುಟುಂಬಕ್ಕೆ ಸಂಭವಿಸುವ ಅನಾಹುತಕ್ಕೆ ನಾವೇ ಕಾರಣರಾಗುತ್ತೇವೆ. ನಾವು ನಮ್ಮ ಕುಟುಂಬಕ್ಕಾಗಿ ಪ್ರಥಮ ಆದ್ಯತೆ ಕೊಡಬೇಕು ಕುಟುಂಬದ ಸಮಸ್ಯೆಗೆ ನಾವು ಸ್ಪಂದನೆ ನೀಡಬೇಕು ಮತ್ತು ಮರಣ ಹೊಂದಿದ ತಂದೆ ತಾಯಿಗೆ ದುಆ ಮಾಡುವ ಮಕ್ಕಳು ಹಾಗೂ ನಾವು ಕೊಡುವ ದಾನ ( ಸ್ವದಖತುನ್ ಜಾರಿಯಾ ) ಇದು ನಮ್ಮೊಂದಿಗೆ ಬರುವ ಸತ್ಕರ್ಮವಾಗಿರುತ್ತದೆ ಅದನ್ನು ನಾವು ಮಾಡಬೇಕಾಗಿದೆ ಹಾಗೂ ಸೌದಿ ಮರುಭೂಮಿಯಲ್ಲಿ ಮಾದಕ ದೃವ್ಯದ ಕೆಲವು ಪ್ರಕರಣ ಗಳು ಬೆಳಕಿಗೆ ಬಂದಿದ್ದು ನಾವು ದುಡಿಯಲು ಬಂದಿದ್ದೇವೆ. ಆದುದರಿಂದ ಎಲ್ಲರೂ ಜಾಗ್ರತೆ ವಹಿಸಲು ಕಿವಿ ಮಾತಿನ ಮೂಲಕ ಅಧ್ಯಕ್ಷ ಸುಲೈಮಾನ್ ರವರು ಸಲಹೆ ನೀಡಿ ಕುಟುಂಬದ ಬಗ್ಗೆ ಹಿತವಚನ ನೀಡಿದರು.

2026-27 ನೇ ನೂತನ
ನೂತನ ಸಮಿತಿ ಆರಿಸಲಾಯಿತು.
ಅಧ್ಯಕ್ಷ: ಸುಲೈಮಾನ್ ಶರೀಫ್
ಉಪಾಧ್ಯಕ್ಷರು:
ನಿಯಾಝ್ ಅಹ್ಮದ್ ಮತ್ತು ಸೈಫುಲ್ಲ
ಪ್ರಧಾನ ಕಾರ್ಯದರ್ಶಿ: ರಿಝ್ವಾನ್ ಕಾರ್ಯದರ್ಶಿಗಳು: ರಫೀಖ್ ಮತ್ತು ಶಮೀರ್ ಅಬ್ಬಾಸ್
ಕೋಶಾಧಿಕಾರಿ:
ಅಶ್ರಫ್ ( ಅಚ್ಚು)
ಉಪ ಕೋಶಾಧಿಕಾರಿ: ಉಸ್ಮಾನ್
ಸಂಘಟನಾ ಕಾರ್ಯದರ್ಶಿ
ಮಿಯಾಂದಾದ್ ಮತ್ತು
ಸೈಫುಲ್ಲ ( ಅಲ್ ಹಸ )
ಸಲಹೆಗಾರರು:
ಹಸನ್ ಬಾವಾ ರಿಯಾದ್
ಝುಬೈರ್ ರಿಯಾದ್
ನಿಯಾಝ್ ಜಿದ್ದಾ
ರಸ್ವೀರ್ ಜಿದ್ದಾ
ಪಿ.ಕೆ. ಅಬ್ದುಲ್ ಗಫೂರ್ ಜುಬೈಲ್
ಮೀಡಿಯಾ ಕಾರ್ಯದರ್ಶಿ:
ಅಬ್ದುಲ್ ಗಫೂರ್
ಲೆಕ್ಕ ಪರಿಶೋಧಕ:
ಶರ್ ವಾನ್ ಮುಹ್ಯಿದ್ದೀನ್
ಕಾರ್ಯಕಾರಿ ಸಮಿತಿ ಸದಸ್ಯರು:
ಶಹ್ ರಾನ್
ಶಮ್ಮಾಝ್
ಫಿರೋಝ್
ಮುನವ್ವರ್
ಇಮ್ರಾನ್
ಸುಹೈಲ್
ತಂಸ್ಸಾಬ್
ಫಾಯಿಝ್
ಅಝ್ ಮ್
ಶಹ್ ಬಾಝ್
ಸಫೀಫ್
ಸಭೆಯಲ್ಲಿ ಸೇರಿದ ಸರ್ವ ಸದಸ್ಯರ ಸಹಮತದಿಂದ ನೂತನ ಸಮಿತಿ ರಚಿಸಲಾಯಿತು.
ನಾವೆಲ್ಲಾ ಒಗ್ಗಟ್ಟಾಗಿ ದುಡಿಯಬೇಕು ನಮ್ಮ ಕುಟುಂಬಕ್ಕಾಗಿ ನಮ್ಮ ಸಂಸ್ಥೆ ಜಿಸಿಸಿಯಲ್ಲಿ ಅಪಾರ ಸಾಧನೆ ಮಾಡಿದೆ ಇನ್ನು ಮುಂದಕ್ಕೂ ಅದೇ ರೀತಿ ಒಗ್ಗಟ್ಟಿನಲ್ಲಿ ನಮ್ಮ ಕುಟುಂಬಕ್ಕಾಗಿ ನಾವು ದುಡಿಯೋಣ ಎಲ್ಲರಿಗೂ ದೀರ್ಘಾಯುಷ್ಯ, ಆಯುರಾರೋಗ್ಯ, ಆಫಿಯತ್ ನೀಡಲು ದುಆ ಮಾಡುವ ಮೂಲಕ ನಮ್ಮ ಕುಟುಂಬದ ಹಿರಿಯ ಸದಸ್ಯರಾದ ಹಸನ್ ಬಾವಾರವರು ಸಭೆಗೆ ಪುಷ್ಟಿ ನೀಡಿದರು.
ತಂದೆ ತಾಯಿಯನ್ನು ಪ್ರೀತಿಸಿ ಅವರೊಂದಿಗೆ ಸ್ನೇಹದಿಂದ ಕೂಡಿ ಬಾಳಿರಿ. ಅವರ ಮನಸ್ಸು ನೋಯಿಸಿದ್ದರೆ ಇಂದೇ ಕರೆ ಮಾಡಿ ಅವರನ್ನು ಚೆನ್ನಾಗಿ ನೋಡಿಕೊಳ್ಳಿ
ತಂದೆ ತಾಯಿಯನ್ನು ಕಳಕೊಂಡ ಮೇಲೆ ಎಲ್ಲವೂ ಕುಟುಂಬ ಕತ್ತಲೆಯಾಗಬಹುದು.
ತಂದೆ ತಾಯಿಯ ಪ್ರೀತಿಯು ನಮ್ಮ ಹಣಕ್ಕಿಂತ ಮುಖ್ಯ. ಕುಟುಂಬಸ್ಥರು ಒಗ್ಗಟ್ಟಿನಿಂದ ಬಾಳೋಣ ಎಂದು ಉಪಾಧ್ಯಕ್ಷ ನಿಯಾಝ್ ಅಹ್ಮದ್ ರವರು ಬಾಹುಕರಾಗಿ ಸಭೆಯಲ್ಲಿ ನುಡಿ ಮುತ್ತುಗಳನ್ನು ಸುರಿದರು.
ಎಲ್ಲಾ ವರ್ಷ ದಂತೆ ಈ ವರ್ಷವೂ ನಮ್ಮ ಕುಟುಂಬದ ಅರ್ಹ ಸದಸ್ಯರಿಗೆ ರಮಳಾನ್ ಕಿಟ್ ವಿತರಿಸಲು ತೀರ್ಮಾನ ಮಾಡಲಾಯಿತು.
ನಮ್ಮ ಸಂಸ್ಥೆಯ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಇಫ್ತಾರ್ ಕೂಟ ರಮಳಾನ್ ತಿಂಗಳ ಪ್ರಥಮ ವಾರದಲ್ಲಿ ಮಾಡಲು ಸಭೆಯಲ್ಲಿ ನಿರ್ದಾರ ಮಾಡಲಾಯಿತು ಮುಂದಿನ ಮಾಸಿಕ ಸಭೆಯಲ್ಲಿ ಅದರ ಬಗ್ಗೆ ತೀರ್ಮಾನ ಮಾಡಲಾಗುವುದು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ಇದರ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಇಸ್ಮಾಯಿಲ್ ಕಾಟಿಪಳ್ಳ
ಮಾತನಾಡಿ ಅಧಿಕಾರ, ಸನ್ಮಾನ ಪ್ರಶಸ್ತಿಗೆ ಸೀಮಿತವಾಗಿರದೆ ಅಲ್ಲಾಹನ ಮಾರ್ಗದಲ್ಲಿ ಫಲ ನೀಡುವ ನೇತೃತ್ವವಾಗಲಿ ಎಂದು ನೂತನ ಸಮಿತಿಗೆ ಶುಭ ಹಾರೈಸಿದರು.
ಕೊನೆಯಲ್ಲ ರಿಝ್ವಾನ್ ಧನ್ಯವಾದಗೈದರು.



All the Best!