janadhvani

Kannada Online News Paper

ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ

ವಾರಾಂತ್ಯದ ರಜೆ ಸೇರಿದಂತೆ ಮೂರು ದಿನಗಳ ರಜೆ ಇರಲಿದೆ.

ಕುವೈತ್ ಸಿಟಿ: ಇಸ್ರಾಅ್ ಮತ್ತು ಮಿ’ರಾಜ್ ದಿನದ ಅಂಗವಾಗಿ ಕುವೈತ್‌ನಲ್ಲಿ ಜನವರಿ 18 ರ ಭಾನುವಾರ ಸಾರ್ವಜನಿಕ ರಜಾದಿನವಾಗಿರುತ್ತದೆ ಎಂದು ನಾಗರಿಕ ಸೇವಾ ಆಯೋಗವು ಘೋಷಿಸಿದೆ.

ಇದರ ಪರಿಣಾಮವಾಗಿ ವಾರಾಂತ್ಯದ ರಜೆ ಸೇರಿದಂತೆ ಮೂರು ದಿನಗಳ ರಜೆ ಇರಲಿದೆ. ಆದಾಗ್ಯೂ, ಈ ಸಾರ್ವಜನಿಕ ರಜಾದಿನವು ತುರ್ತು ಸ್ವರೂಪದ ವಿಶೇಷ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ.