janadhvani

Kannada Online News Paper

2ನೇ ಫಿದಾಕ್ ಅವಾರ್ಡ್-ತೋಕೆ ಕಾಮಿಲ್ ಸಖಾಫಿಗೆ

ಬಂಟ್ವಾಳದ ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅ್ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ ‘ಮುಈನುಸ್ಸುನ್ನಃ’

ನೀಡುವ ‘ಫಿದಾಕ್ ಅವಾರ್ಡ್ ‘ ನ 2025-26 ಸಾಲಿಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯದ್ದೀನ್ ಕಾಮಿಲ್ ಸಖಾಫಿ ಆಯ್ಕೆಯಾಗಿದ್ದಾರೆ.

ಅತ್ತಫ್ ಹೀಮ್ ಫೀ ಮಸಾಇಲಿ ತ್ತಹ್ ಕೀಮ್ , ನಸ್ಖುಲ್ ವಿಜಾಹ್ ಫೀ ಫಸ್ಖಿನ್ನಿಕಾಹ್ , ತಫ್ರೀಹುಲ್ ಫುವಾದ್ ಬಿ ಅದಿಲ್ಲತಿಲ್ ಇಹ್ತಿಫಾಲಿ ಬಿಲ್ ಮೀಲಾದ್, ಅಲ್ ಕೌಲುಸ್ಸಯ್ಯಿತ್ ಫೀ ಸ್ವಲಾತಿನ್ನಿಸಾಇ ಅಲಲ್ ಮಯ್ಯಿತ್ , ಅಲ್ ಬುರ್ಹಾನುಲ್ ಅಖ್ ವಮ್ ಫೀ ಅದಿಲ್ಲತಿ ಸ್ಸವಾದಿಲ್ ಅ ಅ್ ಳಮ್ (ನಾಲ್ಕು ಭಾಗಗಳು), ಕಷ್ಫುಶ್ಶುಬ್ ಹಾತ್ ಅಮ್ಮಾ ಯತ ಅಲ್ಲಖು ಬಿಲ್ ಅಮ್ ವಾತ್, ತಹ್ವೀಲುಲ್ ಇನ್ಸ್ ಅನ್ ತಹ್ ವೀಲಿಲ್ ಜಿನ್ಸ್ — ಮುಂತಾದ ಏಳು ಅರಬಿ ಗ್ರಂಥಗಳನ್ನು ರಚಿಸಿರುವ ಅವರು

ರಸ್ಮುಲ್ ಉಸ್ಮಾನಿ: ಸಂಶಯಗಳಿಗೆ ಉತ್ತರ, ರಸ್ಮುಲ್ ಉಸ್ಮಾನಿ: ಶಿಥಿಲ ತಂತ್ರಗಳಿಗೆ ಸಬಲ ಮಂತ್ರಗಳು, ತರಾವೀಹ್: ಒಂದು ಸಮಗ್ರ ಅಧ್ಯಯನ,

ಮದ್ಸ್ ಹಬ್ ಮತ್ತು ತಖ್ ಲೀದ್,

ನಮಾಜಿನ ನಂತರ ಸಾಮೂಹಿಕ ಪ್ರಾರ್ಥನೆ, ತರೀಖತ್: ಸತ್ಯಾನ್ವೇಶಿಗಳಿಗೊಂದು ಕೈಪಿಡಿ,

ಶೈಖ್ ಜೀಲಾನಿ ಮತ್ತು ರಾತೀಬ್,

ಗೋರಿಗಳ ಸುತ್ತಮುತ್ತ, ಉರೂಸ್ ಆಚರಣೆ ಇಸ್ಲಾಮಿನಲ್ಲಿ,

ಪವಿತ್ರ ಖುರ್ ಆನಿನ ಕೊನೆಯ ಅಮ್ಮ ಕಾಂಡದ ವ್ಯಾಖ್ಯಾನ ಹಾಗೂ ಎಪಿ ಉಸ್ತಾದರ ಹಜ್ಜ್ ಕೃತಿಯ ಕನ್ನಡಾನುವಾದ ಮುಂತಾದ 11 ಕನ್ನಡ ಕೃತಿಗಳನ್ನಲ್ಲದೇ

ರಸ್ಮುಲ್ ಉಸ್ಮಾನಿ ಸತ್ಯವುಂ ಮಿಥ್ಯಯುಂ ಎಂಬ ಮಳಯಾಲಂ ಕೃತಿಯನ್ನೂ ರಚಿಸಿದ್ದಾರೆ.

ಸುನ್ನಿ ಆಶಯಾದರ್ಶಗಳ ಪ್ರಸರಣಕ್ಕಾಗಿ

ಬೋಧನೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ

ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು 25,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಬರಹಗಾರ ಎಸ್.ಪಿ. ಹಂಝ ಸಖಾಫಿ ,ಹಾಗೂ ಎ.ಕೆ. ನಂದಾವರ ಅವರನ್ನೊಳಗೊಂಡ ಸಮಿತಿಯು ಇವರನ್ನು ಆಯ್ಕೆ ಮಾಡಿದೆ.

ಜನವರಿ 12 ರಂದು ನಡೆಯುವ ಕೆಜಿಎನ್ ದ‌ಅ್‌ವಾ ಕಾಲೇಜು ವಿದ್ಯಾರ್ಥಿಗಳ

ವಾರ್ಷಿಕೋತ್ಸವ ‘ಫಿದಾಕ್ ‘ ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮರ್ಹೂಂ‌ ಎನ್ ಎಂ ಉಸ್ತಾದರ ದರ್ಸ್ ಶಿಷ್ಯರಾಗಿದ್ದು, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಯಲ್ಲಿ ಕಾಮಿಲ್ ಸಖಾಫಿ ಪದವಿ‌‌ ಪಡೆದು ವಿವಿಧ ಮೊಹಲ್ಲಾಗಳಲ್ಲಿ ಮುದರ್ರಿಸ್ ಆಗಿ ಸೇವೆಗೈದಿದ್ದ ಅವರು ಪ್ರಸ್ತುತ ನಚ್ಚಬೆಟ್ಟು ದಾರುಲ್ ಮುಸ್ತಫಾ ಸಂಸ್ಥೆಯನ್ನು‌ ಮುನ್ನಡೆಸುತ್ತಿದ್ದಾರೆ.