ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಕೆಸಿಎಫ್ ಒಮಾನ್ ಮಸ್ಕತ್ ಝೋನ್ MRF (ಮೆಂಬರ್ಸ್ ರಿಲೀಫ್ ಫಂಡ್) ಯೋಜನೆಯ ಸದಸ್ಯರಾದ ಮರ್ಹೂಂ ಶಮೀಮ್ ಪಡುಬಿದ್ರಿ ರವರ ಕುಟುಂಬಕ್ಕೆ MRF ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ಕೆಸಿಎಫ್ ಒಮಾನ್ ಮಸ್ಕತ್ ಝೋನ್ ಅಧ್ಯಕ್ಷರಾದ ಲತೀಫ್ ಮಂಜೇಶ್ವರವರು ಸ್ಥಳೀಯ KMJ, SYS, SSF ನಾಯಕರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಪಡುಬಿದ್ರಿ ಜಾಮಿಅ ಜುಮಾ ಮಸ್ಜಿದ್ ಖತೀಬ್ ಮೌಲಾನಾ ಅಬ್ದುಲ್ ಖುದ್ದೂಸ್ ರವರು ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ
ಕೆಎಂಜೆ,ಎಸ್ ವೈ ಎಸ್ ಪಡುಬಿದ್ರಿ ಘಟಕ ಅಧ್ಯಕ್ಷರಾದ ಹಸನ್ ಬಾವ ಪಡುಬಿದ್ರಿ ಎ.ಕೆ ಸಯ್ಯದ್ ಅಲಿ ಪಡುಬಿದ್ರಿ ಅಬ್ದುಲ್ ರಝಾಕ್ ಪಡುಬಿದ್ರಿ ಅಯಾಝ್ ಪಡುಬಿದ್ರಿ ಕೆಸಿಎಫ್ ಸೌದಿ ಅರೇಬಿಯಾ ಸಿ.ಪಿ ನಝೀರ್ ಅಝೀಝ್ ಗೋವಾ ಹಾಜರಿದ್ದರು.


