janadhvani

Kannada Online News Paper

ಡಿಸೆಂಬರ್ 23 ಕ್ಕೆ ಪಂಪ್ ವೆಲ್ ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ ಹಾಗೂ ಹಿಮಮಿ ಸಂಗಮ

ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದ್ದು

ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ

ಹಿಮಮೀಸ್ ಸಂಗಮವನ್ನು

2025 ಡಿಸೆಂಬರ್ 23‌ ಮಂಗಳವಾರದಂದು ಮಂಗಳೂರು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್ ನ DKC ಹಾಲ್ ನಲ್ಲಿ

ಆಯೋಜಿಸಲಾಗಿದೆ.

ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಹಾಗೂ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಅವರು ನಾಯಕತ್ವ ವಹಿಸಲಿದ್ದಾರೆ. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಷರಫುದ್ದೀನ್ ತಂಙಳ್ ಪರೀಧ್ ನಗರ, ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್, ಮುಸ್ಲಿಂ ಜಮಾಅತ್ ಪ್ರ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ, ಎಸ್ ವೈಎಸ್ ಪ್ರ ಕಾರ್ಯದರ್ಶಿ ಕೆ ಎಮ್ ಸಿದ್ದೀಖ್ ಮೋಂಟುಗೋಳಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರ ಕಾರ್ಯದರ್ಶಿ ಇಕ್ಬಾಲ್ ಬರಕ ಓಮಾನ್, ಎಸ್ ಎಮ್ ಎ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ, ಎಸ್ ಜೆ ಎಂ ಪ್ರ. ಕಾರ್ಯದರ್ಶಿ ಮುಹಮ್ಮದ್ ಮದನಿ, ಎಸ್ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಲಿಕೆ, ಕರ್ನಾಟಕ ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸ ಅದಿ,ಕೆಕೆಎಂ ಕಾಮಿಲ್ ಸಖಾಫಿ , ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸ್ಹಾಕ್ ಹಾಜಿ ಬೊಳ್ಳಾಯಿ ಸಮೇತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9.30 ರಿಂದ ಅಪರಾಹ್ನ 1.30ರ ತನಕ ಈ ಕಾರ್ಯಕ್ರಮ ನಡೆಯಲಿದೆ,

ಆದುದರಿಂದ ಸಂಘಟಕರು ಎಲ್ಲಾ ನಾಯಕರಿಗೂ , ಕಾರ್ಯಕರ್ತರಿಗೂ ತಿಳಿಸಿ, ವಾಯ್ಸ್ ಮೇಸೇಜ್ ಮತ್ತು ಕರೆಗಳನ್ನು ಮಾಡಿ ಆಮಂತ್ರಣ ನೀಡಲು ಪ್ರೀತಿಪೂರ್ವಕ‌ ವಿನಂತಿಸುತ್ತೇವೆ . ಎಂದು ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.