janadhvani

Kannada Online News Paper

ಇಂದು ಕೊಳಕೆಯಲ್ಲಿ ಅಸ್ಸಯ್ಯಿದ್ ಚಟ್ಟೆಕ್ಕಲ್ ತಂಙಳ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ

ದೀವಾನ್ -ಇ-ಖಾಝಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ಅಲ್ ಬುಖಾರಿ ಚಟ್ಟೆಕ್ಕಲ್ ತಂಙಳ್ ಅವರಿಗೆ ಬಂಟ್ವಾಳ ತಾಲೂಕು ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ಡಿಸೆಂಬರ್ 05 ಶುಕ್ರವಾರ ಇಂದು ಸಂಜೆ 4 ಗಂಟೆಗೆ ಕೊಳಕೆ ಮಸ್ಜಿದ್ ವಠಾರ ತಾಜುಲ್ ಉಲಮಾ ವೇದಿಕೆಯಲ್ಲಿ ಗೌರವಾರ್ಪಣೆ ನಡೆಯಲಿದೆ.

ಮದ್ಯಾಹ್ನ 3 ಗಂಟೆಗೆ ಅಮ್ಮೆಂಬಳ, ಜಾರದಗುಡ್ಡೆ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಾದಾತ್ ಉಲಮಾ,ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಚಯರ್ಮೆನ್ ಆಶ್ರಫ್ ಸಖಾಫಿ ಆಲಡ್ಕ ಕರೆ ನೀಡಿದ್ದಾರೆ