ರಿಯಾದ್: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೌದಿ ಸಾಮಾನ್ಯ ಸಾರಿಗೆ ಪ್ರಾಧಿಕಾರವು ದೇಶದಲ್ಲಿ 1,349 ಜನರನ್ನು ಬಂಧಿಸಿದೆ. ಪರವಾನಗಿ ಇಲ್ಲದೆ ಪ್ರಯಾಣಿಕ ಸೇವೆಗಳನ್ನು ನಿರ್ವಹಿಸಿದ್ದಕ್ಕಾಗಿ ನವೆಂಬರ್ 15 ಮತ್ತು 21 ರ ನಡುವೆ ಈ ಬಂಧನಗಳು ನಡೆದಿದೆ.
ಈ ಪೈಕಿ 626 ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. 723 ವಾಹನಗಳು ಈ ರೀತಿ ಪ್ರಯಾಣ ನಡೆಸಲು ಸಿದ್ಧತೆ ನಡೆಸುತ್ತಿದ್ದವು. ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ದಂಡ ವಿಧಿಸುವುದು ಸೇರಿದಂತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪರವಾನಗಿ ಇಲ್ಲದೆ ಪ್ರಯಾಣ ಸೇವೆಗಳನ್ನು ಒದಗಿಸಲು ಪ್ರಯತ್ನಿಸಿದರೆ 20,000 ರಿಯಾಲ್‌ಗಳವರೆಗೆ ದಂಡ ಮತ್ತು 60 ದಿನಗಳವರೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾಧಿಕಾರವು ಎಚ್ಚರಿಸಿದೆ. ಮತ್ತೆ ಮತ್ತೆ ಕಾನೂನನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ 11,000 ರಿಯಾಲ್‌ಗಳವರೆಗೆ ದಂಡ ಮತ್ತು 25 ದಿನಗಳವರೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.


