ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಸುವ ಕೌನ್ಸಿಲರ್ಸ್ ಕಾಂಕ್ಲೇವ್ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಗಂಟೆಗೆ ಅಲ್ ಹಸನ್ ಅಕಾಡೆಮಿ ಅಡ್ಯಾರ್ ನಲ್ಲಿ ನಡೆಯಿತು.

ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ತಂಙಳ್ ಎರುಮಾಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಜಿಲ್ಲಾ ಕೌನ್ಸಿಲರ್ಸ್ ಕಾಂಕ್ಲೇವ್ ಕಾರ್ಯಕ್ರಮವನ್ನು ನಡೆಸಿದರು.
ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ ಅವಲೋಕನ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ತೌಸೀಪ್ ಸಅದಿ ಹರೇಕಳ ಮುನ್ನುಡಿ ಭಾಷಣ ಮಾಡಿದರು.
ರಾಜ್ಯ ಕಾರ್ಯದರ್ಶಿ ಮಹಮ್ಮದಲಿ ಸಖಾಫಿ ಸುರಿಬೈಲ್ ಹಾಗೂ ಆಸಿಫ್ ಹಾಜಿ ಕೃಷ್ಣಾಪುರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸ ಅದಿ ನಾವೂರು ಸಾಂತ್ವನದ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಬದ್ರುದ್ದೀನ್ ಅಝ್ಹರಿ ಕೈಕಂಬ,ಜಿಲ್ಲಾ ಕಾರ್ಯದರ್ಶಿಗಳಾದ ಫಾರೂಕ್ ಶೇಡಿಗುರಿ,ಮುತ್ತಲಿಬ್ ವೇಣೂರು,ಮಹ್ಮೂದ್ ಸ ಅದಿ ಕುಕ್ಕಾಜೆ,ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್,ಜಿಲ್ಲಾ ನಾಯಕರಾದ ಇಬ್ರಾಹಿಂ ಸಖಾಫಿ ಸೆರ್ಕಳ,ಶರೀಪ್ ಮುಡಿಪು,ಕಾಸಿಂ ಲತೀಫಿ ಮಂಜನಾಡಿ,ಇಬ್ರಾಹಿಂ ಅಹ್ಸನಿ ಮಂಜನಾಡಿ,ನೌಫಲ್ ಫರೀದ್ ನಗರ, ಹಾಫಿಳ್ ಮಜೀದ್ ಪಾಳಿಲಿ ಗಾಣೆಮಾರ್,ಹೈದರ್ ಮದನಿ ಸೂರಿಂಜೆ,ಉಸ್ಮಾನ್ ಝುಹ್ರಿ ಕಿನ್ಯ,ಉಸ್ಮಾನ್ ಪಜೀರ್,ಬಶೀರ್ ಸಖಾಫಿ ಉಳ್ಳಾಲ,ಇಸ್ಹಾಕ್ ಉಳ್ಳಾಲ,ಮನ್ಸೂರು ಉಳ್ಳಾಲ,ಅಶ್ರಪ್ ನಾರ್ಶ,ಹಕೀಂ ಪೂಮಣ್ಣು,ಜಿ.ಎ ಇಬ್ರಾಹಿಂ ಮೊದಲಾದ ನಾಯಕರು ಭಾಗವಹಿಸಿದ್ದರು.
ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು,ಜಿಲ್ಲಾ ಕೋಶಾಧಿಕಾರಿ ಅಬ್ದರ್ರಝಾಕ್ ಭಾರತ್ ಕಾರ್ಯಕ್ರಮ ನಿರೂಪಿಸಿದರು.


