ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಉತ್ತರ ಪ್ರದೇಶ ಜೋನ್ಪುರ್ ನಿವಾಸಿ ಕಲೀಂ ಅಹ್ಮದ್ ಎಂಬವರ ಮೃದೇಹವನ್ನು ಐಸಿಎಫ್ ವೆಲ್ಫೇರ್ ಕಾರ್ಯಕರ್ತರ ಸಹಾಯದಿಂದ ದಫನ ಮಾಡಲಾಯಿತು. ಕಳೆದ ಒಕ್ಟೋಬರ್ 5 ರಂದು ಮರಣ ಹೊಂದಿದ ಅವರ ಮೃತದೇಹ 22 ದಿನಗಳ ಕಾಲ ಶವಾಗಾರದಲ್ಲಿ ಇಡಲಾಗಿತ್ತು. ಮೃತದೇಹದ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐಸಿಎಫ್ ವೆಲ್ಫೇರ್ & ಸರ್ವೀಸ್ ನಾಯಕರು ತಕ್ಷಣ ಸ್ಪಂದಿಸಿ ಅಗತ್ಯ ದಾಖಲೆಗಳನ್ನು ಸರಿಪಡಿಸಿ ಕಳೆದ ದಿನ ತಸ್ಲೀಸ್ ಬಲಡದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆಗಳನ್ನು ನಿರ್ವಹಿಸಲಾಯಿತು. ಐಸಿಎಫ್ ನಾಯಕರು, ಕಾರ್ಯಕರ್ತರು ಮತ್ತು ಬಂಧು ಮಿತ್ರಾದಿಗಳು ಪಾಲ್ಗೊಂಡಿದ್ದರು.
ಎಕ್ಸಿಟ್ ನಲ್ಲಿ ಊರಿಗೆ ತೆರಳಿದ್ದ ಕಲೀಂ ಅಹ್ಮದ್ 3 ವರ್ಷ ಮುಂಚೆ ಸೌದಿಗೆ ಮತ್ತೆ ಮರಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಲೀಂ ಪತ್ನಿ ನಸೀಮಾ ಮತ್ತು ಮಕ್ಕಳಾದ ಉಮ್ಮು ಕುಲ್ಸೂಮ್, ಝೀನತ್ ಮತ್ತು ಮುಹಮ್ಮದ್ ಕಫೀಲ್ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
ಖಮೀಸ್ ಮುಶೈತ್ ನಲ್ಲಿ ಹಕೀಮ್ ಅಶ್ರಫ್, ನಿಯಾಸ್ ಸಿ.ಕೆ, ಮುಜೀಬ್ ಕರ್ನಾಟಕ ಮತ್ತು ಶಕೀಲ್ ಯು.ಪಿ ಎಂಬವರೂ ಜಿದ್ದಾದಲ್ಲಿ ಎಂಬಸ್ಸಿ ಸಂಬಂಧಿತ ಕಾರ್ಯಗಳಿಗೆ ಐಸಿಎಫ್ ವೆಸ್ಟ್ ವೆಲ್ಫೇರ್ & ಸರ್ವೀಸ್ ಸೆಕ್ರೆಟರಿ ಅಬೂ ಮಿಸ್ಬಾಹ್ ಐಕಪ್ಪೆಡಿ, ಜಿದ್ದಾ ರೀಜನಲ್ ವೆಲ್ಫೇರ್ & ಸರ್ವಿಸ್ ಸೆಕ್ರೆಟರಿ ಹನೀಫ್ ಬೇರ್ಕ, ಮುಹಮ್ಮದ್ ಸಖಾಫಿ ಉಗ್ರಪುರಂ ಮುಂತಾದವರು ಅಂತ್ಯ ಕ್ರಿಯೆಗಳಿಗೆ ನೇತೃತ್ವ ನೀಡಿದರು.


