ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಬೆಳ್ತಂಗಡಿ ಝೋನ್ ವ್ಯಾಪ್ತಿಯ ಸರ್ಕಲುಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಯುವ ಕೌನ್ಸಿಲರ್ಸ್ ಕಾoಕ್ಲೇವ್ ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆಯಲ್ಲಿ ಇಂದು ನವೆಂಬರ್ 2 ಆದಿತ್ಯವಾರ ಮಧ್ಯಾಹ್ನ 3:00ಗಂಟೆಗೆ ಹಯಾತುಲ್ ಅವುಲಿಯ ದರ್ಗಾ ಶರೀಫ್ ಕಾಜೂರು ನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ಗೊಳ್ಳಲಿದೆ.
ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡವು ಉಪಾಧ್ಯಕ್ಷರಾದ ಉಸ್ಮಾನ್ ಸೋಕಿಲ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಝೋನ್ ಕೌನ್ಸಿಲರ್ಸ್ ಕಾoಕ್ಲೇವ್ ಗೆ ನೇತೃತ್ವ ನೀಡಲಿದ್ದಾರೆ
ಬೆಳ್ತಂಗಡಿ ಝೋನ್ ವ್ಯಾಪ್ತಿಯ ಏಳು ಸರ್ಕಲ್ ಗಳ ಸುಮಾರು ನೂರರಷ್ಟು ಕೌನ್ಸಿಲರ್ ಗಳು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


