ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಸುವ ಕೌನ್ಸಿಲರ್ಸ್ ಕಾಂಕ್ಲೇವ್ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನವೆಂಬರ್ 2 ಆದಿತ್ಯವಾರ ಮದ್ಯಾಹ್ನ 2:00 ಗಂಟೆಗೆ ಅಲ್ ಹಸನ್ ಅಕಾಡೆಮಿ ಅಡ್ಯಾರ್ ನಲ್ಲಿ ನಡೆಯಲಿರುವುದು.
ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ತಂಙಳ್ ಎರುಮಾಡು,ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಜಿಲ್ಲಾ ಕೌನ್ಸಿಲರ್ಸ್ ಕಾಂಕ್ಲೇವ್ ಗೆ ನೇತೃತ್ವ ನೀಡಲಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ತೌಸೀಪ್ ಸಅದಿ ಹರೇಕಳ ಮುನ್ನುಡಿ ಭಾಷಣ ಮಾಡಲಿದ್ದಾರೆ.
ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳ ಸುಮಾರು 150 ಕೌನ್ಸಿಲರ್ ಗಳು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


