ಮಂಗಳೂರು: ಇತ್ತೀಚೆಗೆ ಕರ್ನಾಟಕದ ಮಾಜಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮುಸ್ಲಿಮರು ಒಂದು ನಿರ್ಧಿಷ್ಟ ಪಕ್ಷವನ್ನು ಸೋಲಿಸಲು, ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಅವರಿಗೆ ಇತರ ಪರ್ಯಾಯ ಪಕ್ಷವಿಲ್ಲ! ಎಂದು ಹೇಳಿಕೆ ನೀಡಿದ್ದಾರೆ.
ಮುಸ್ಲಿಮರು ಈ ದೇಶದ ಸ್ವಾತಂತ್ರ್ಯ ನಂತರದಿಂದ ದೇಶದ ಪ್ರಮುಖ ಅಲ್ಪ ಸಂಖ್ಯಾತ ರಾಜಕೀಯ ಪಕ್ಷದೊಂದಿಗೆ ಪ್ರಬಲವಾಗಿ ನಿಂತ ಸಮುದಾಯ ಆಗಿದೆ. ಮುಸ್ಲಿಮರು ಹುಟ್ಟು ಮತೇತರರು. ಈ ದೇಶದ ಮತೇತರ ವ್ಯವಸ್ಥೆಯನ್ನು ದೃಢವಾಗಿ ಬೆಂಬಲಿಸುವ ಜನಾಂಗವಾಗಿದೆ. ಭಾರತ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆ ಇಂದು ಸುದೃಢ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿ ಇರಲು ಕಾರಣ ಈ ದೇಶದ ಸರ್ವ ಮುಸ್ಲಿಮರ ಏಕೈಕ ನಿಲುವು ಎಂದು ಕೆ. ಎನ್. ರಾಜಣ್ಣ ಅರಿಯಲಿ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ಈ ಹಿಂದೆ ಮಹಾರಾಷ್ಟದಲ್ಲಿ ಸಂಸತ್ ಚುನಾವಣೆಯಲ್ಲಿ ಅಲ್ಲಿನ ಜನರು ಸೋಲಿಸಿದಾಗ, ಬಾಂಗ್ಲಾದ ಸಿಂಧ್ ಪ್ರದೇಶದ ಮುಸ್ಲಿಮ್ ಮತದಾರರು ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದ ಚರಿತ್ರೆಯನ್ನು ಅರಿಯುವುದು ಒಳಿತು.
ಶ್ರೀಮತಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕದ ಚಿಕ್ಕ ಮಗಳೂರು ಕ್ಷೇತ್ರದಿಂದ ವಿಜಯಿಯಾಗಿಸಿ ಸಂಸತ್ ಗೆ ಕಳುಹಿಸಿದ್ದು, ಹಾಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಯವರನ್ನು ಕೇರಳದ ವಯನಾಡ್ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸಿದ ಬೆಂಬಲಿತ ಸಮುದಾಯ ಯಾವುದು? ಎಂದು ಕೆ.ಎನ್.ರಾಜಣ್ಣ ಅರಿಯುವುದು ಒಳಿತು. ಮುಸ್ಲಿಮ್ ಮತ ನಿರ್ಧರಣೆ ಬಗ್ಗೆ ಇನ್ನಾದರೂ ಚರಿತ್ರೆಯ ಸ್ವಲ್ಪ ಪಾಠವನ್ನಾದರೂ ಕಲಿಯಲಿ.
ಕೆ.ಅಶ್ರಫ್ ( ಮಾಜಿ ಮೇಯರ್)


