ದುಬೈ : ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಚಳವಳಿ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಮಸ್‍ದರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಇದರ ದುಬೈ ಘಟಕದ ವತಿಯಿಂದ ತಾಜುಲ್ ಉಲಮಾ ಸಂಸ್ಮರಣಾ ಸಂಗಮ ಹಾಗೂ ಮಸ್‍ದರ್ ಮೀಟ್ ಅಕ್ಟೋಬರ್ 25 ರಾತ್ರಿ 8ಗಂಟೆಗೆ ದೇರಾ ದುಬೈ , ಬನಿಯಾಸ್ ಸ್ಕ್ವೆರ್ ಮೆಟ್ರೋ ಸಮೀಪ ಇರುವ ಫ್ಲೋರಿಡಾ ಸಿಟಿ ಸಭಾಂಗಣದಲ್ಲಿ ನಡೆಯಲಿದೆ.ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಕೆದುಂಬಾಡಿ ಸಭೆಯನ್ನು ಉದ್ಘಾಟನೆ ಮಾಡಲಿದ್ದು ಮಸ್‍ದರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಇದರ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಹೂವಿನ ಹಡಗಲಿ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ನಾಯಕ್ , ಮಸ್‌ದರ್ ಉಪಾಧ್ಯಕ್ಷ ವಾರದ ಗೌಸ್ ಮೊಯಿದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಇನ್ನಿತರ ಪ್ರಮುಖ ಗಣ್ಯರು ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚೇರ್ಮಾನ್ ನವಾಝ್ ಹಾಜಿ ಕೋಟೆಕಾರ್ ತಿಳಿಸಿದ್ದಾರೆ.







