janadhvani

Kannada Online News Paper

ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ

ಉಡುಪಿ: ಕರ್ನಾಟಕ ಸರ್ಕಾರ ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜನ ಸೇವಕ ರಾಜಕೀಯ ನಾಯಕ ಉಮರಾ ಮುಂದಾಳು ಸನ್ಮಾನ್ಯ ಎಮ್ ಎ ಗಫೂರ್ ಮೂಳೂರು ರವರಿಗೆ ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟವಾದ ಸುನ್ನೀ ಕೋ-ಓಡಿನೇಶನ್ ವತಿಯಿಂದ ಸಮಿತಿ ಅಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ರವರ ನೇತೃತ್ವದಲ್ಲಿ ಅಂಬಾಗಿಲು ಸುನ್ನೀ ಕಛೇರಿಯಲ್ಲಿ ಜರುಗಿತು .

ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜುನೈದ್ ಅರ್ರಿಫಾಯಿ ತಂಙಳ್ ರಂಗಿನಕೆರೆ ದುಆ ಗೈದರು

ಸಯ್ಯದ್ ಫರೀದ್, ಇರ್ಷಾದ್ ಸಾಬ್ ಬಸ್ರೂರು, ಎಮ್ ಎ ಬಾವು ಹಾಜಿ, ಅಬ್ದುಲ್ ಹಮೀದ್ ಅದ್ದು, ಶೇಖ್ ನಯೀಮ್ ಕಟಪಾಡಿ, ವೈಬಿಸಿ ಬಶೀರ್ ಅಲಿ ಮೂಳೂರು,ವೈ ಎಮ್ ಇಲ್ಯಾಸ್, ಅಡ್ವೋಕೇಟ್ ಇಲ್ಯಾಸ್, ಅಡ್ವೋಕೇಟ್ ಹಬೀಬ್ ಅಲಿ,ಯು ಜೆ ಹನೀಫ್, ರಝಾಕ್ ಮದದಿ, ಫಾರೂಖ್ ಆರ್ ಕೆ, ಅಶ್ರಫ್ ದಾರುಸ್ಸಲಾಂ, ರಫೀಕ್ ದೊಡ್ಡಣಗುಡ್ಡೆ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು

ಕಾರ್ಯದರ್ಶಿ ಸುಭಾನ್ ಹೊನ್ನಾಳ ಸ್ವಾಗತಿಸಿದರು ಕೋಶಾಧಿಕಾರಿ ವಸೀಮ್ ಕುಂದಾಪುರ ವಂದಿಸಿದರು