ದುಬೈ: ಪ್ರತಿಷ್ಠಿತ ದಾರುಲ್ ಹುದಾ ತಂಬಿನಮಕ್ಕಿ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಆಯೋಜಿಸಲ್ಪಡುವ “ಗ್ರಾಂಡ್ ರಿಫಾಯಿ ರಾತೀಬ್ 2025” ಎಂಬ ಭವ್ಯ ಆಧ್ಯಾತ್ಮಿಕ ಸಮಾರಂಭದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಈ ಮಹತ್ವದ ಕಾರ್ಯಕ್ರಮವು 2025ರ ನವೆಂಬರ್ 1ರಂದು (ಶನಿವಾರ) ರಾತ್ರಿ 8.00 ಗಂಟೆಗೆ, ದುಬೈ ದೇರಾ ಬನಿಯಾಸ್ ಮೆಟ್ರೋ ಸ್ಟೇಷನ್ ಹತ್ತಿರದ ಲ್ಯಾಂಡ್ ಮಾರ್ಕ್ ಹೋಟೆಲ್‌ನಲ್ಲಿ ನಡೆಯಲಿದೆ.
ಸ್ವಾಗತ ಸಮಿತಿಯನ್ನು ದಾರುಲ್ ಹುದಾ ಎಜುಕೇಶನ್ ಸೆಂಟರ್ ಮೆನೇಜರ್ ಜನಾಬ್ ಖಲೀಲ್ ಹಿಮಮಿ ಉಸ್ತಾದ್ ಅವರ ನೇತ್ರತ್ವದಲ್ಲಿ ರಚಿಸಲಾಗಿದೆ.
ಸ್ವಾಗತ ಸಮಿತಿ (Reception Committee):
ಅಧ್ಯಕ್ಷರು: ದಾವೂದ್ ಮಾಸ್ಟರ್
ಕನ್ವೀನರ್: ರಿಫಾಯಿ ಗುನಾಡ್ಕ
ಹಣಕಾಸು ಇಂಚಾರ್ಜ್: ಶಕೀಲ್ ಬೆಳ್ಳಾರೆ
ಉಪಾಧ್ಯಕ್ಷರು: ಶಾಫಿ ಕಲಂಜ, ಮುಜೀಬ್ ಜಟ್ಟಿಪಳ್ಳ
ಈ ಕಾರ್ಯಕ್ರಮದ ಉದ್ದೇಶ ದಾರುಲ್ ಹುದಾ ತಂಬಿನಮಕ್ಕಿಯ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲ ನೀಡುವುದು.
ಈ ಮಹಾಸಭೆಯನ್ನು ದಾರುಲ್ ಹುದಾ ಎಜುಕೇಶನ್ ಸೆಂಟರ್ (ಆರ್) — ಅಹ್ದಲಿಯಾ ನಗರ, ತಂಬಿನಮಕ್ಕಿ, ಪಿ.ಓ. ಬೆಳ್ಳಾರೆ, ಸುಳ್ಯ ಇದರ ಆಶ್ರಯದಲ್ಲಿ ಆಯೋಜಿಸಲಾಗಿದೆ.








