ಮನಾಮ: ಕೆಸಿಎಫ್ ಮನಾಮ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಸ್ವಾಗತ ಸಮಿತಿ ಚೇರ್ಮಾನ್ ಮುಝಮ್ಮಿಲ್ ಕೋಲ್ಪೆ ಅವರ ಅಧ್ಯಕ್ಷತೆಯಲ್ಲಿ ಮನಾಮ ಕೆ-ಸಿಟಿ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು. ಐಸಿಎಫ್ ನಾಯಕರಾದ ಹಾಫಿಳ್ ಅಝ್ಹರ್ ತಂಙಳ್’ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ಮುಹಮ್ಮದ್ ಶಾಮಿಲ್ ಪೖಂಬಚ್ಚಾಲ್ ಖಿರಾಅತ್ ಪಠಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಕಾರ್ಯಕ್ರಮಕ್ಕೆ ಶುಭ ಹಾರೖಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಮಿಆ ಸಅದಿಯಾ ಫ್ರೋಪೆಶರ್, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಬಹುಮಾನ್ಯರಾದ ಕೆ. ಪಿ. ಹುಸೖನ್ ಸಅದಿ ಕೆ. ಸಿ. ರೋಡ್ ಉಸ್ತಾದರ ಮುಖ್ಯ ಪ್ರಭಾಷಣದಲ್ಲಿ ಕೆಸಿಎಫ್ ಸುನ್ನತ್ ಜಮಾಅತಿನ ಆಶಯ ಆದರ್ಶದ ಅತ್ಯಂತ ಶಕ್ತಿಯುತವಾದ ಸಂಘಟನೆಯಾಗಿದೆ. ನಮ್ಮ ಎಲ್ಲಾ ಕಾರ್ಯಾಚರಣೆಗಳು ಪರಲೋಕದ ವಿಜಯಕ್ಕಾಗಿರಬೇಕು. ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಸಾಂತ್ವನ ನೀಡಬೇಕು. ನಮ್ಮ ಎಲ್ಲಾ ಚಲನ ವಲನಗಳನ್ನು ಅಲ್ಲಾಹು ಮತ್ತು ರಸೂಲರು ವೀಕ್ಷಿಸುತ್ತಿದ್ದಾರೆಂಬ ಪ್ರಜ್ಞೆ ನಮ್ಮಲ್ಲಿರಬೇಕು. ನಾವು ಅವರ ತೃಪ್ತಿಯಲ್ಲಿ ಜೀವಿಸಲು ಸನ್ನದ್ದರಾಗಬೇಕು. ಕುಟುಂಬ ಸಂಬಂಧ ಬಲ ಪಡಿಸಬೇಕು ಎಂದು ಸಅದಿ ಉಸ್ತಾದರು ಕರೆ ನೀಡಿದರು.
ಹಾಫಿಳ್ ಅಝ್ಹರ್ ತಂಙಳ್, ಕೆ. ಪಿ. ಹುಸೖನ್ ಸಅದಿ ಕೆ.ಸಿ. ರೋಡ್ ಉಸ್ತಾದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸ್ವಾಗತ ಸಮಿತಿ ಚೇರ್ಮಾನ್ ಮುಝಮ್ಮಿಲ್ ಕೋಲ್ಪೆ, ಸಂಘಟನೆಯಲ್ಲಿ ಆವೇಶ ಭರಿತವಾಗಿ ಕಾರ್ಯಾಚರಿಸಿದ ನಝೀರ್ ಹಾಜಿ ದೇರಳಕಟ್ಟೆ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಮನಾಮ ಸೆಕ್ಟರಿನ ಹಿರಿಯ ವ್ಯಕ್ತಿ ಅಬೂಬಕ್ಕರ್ ಮಾದಾಪುರ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೖಧ್ಯಕೀಯ ಶಿಕ್ಷಣದಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ. ಸಫೀನಾ ಝೖನಬರವರ ಸನ್ಮಾನವನ್ನು ಸಹೋದರ ಮನಾಮ ಸೆಕ್ಟರ್ ಕಾರ್ಯಕರ್ತ ಸವಾದ್ ಉಳ್ಳಾಲರವರು ಸ್ವೀಕರಿಸಿದರು.
ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟ್ಟ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೆಸಿಎಫ್ ಐಸಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖಲಂದರ್ ಉಸ್ತಾದ್ ಕಕ್ಕೆಪದವು, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಾಝ್ ಉಜಿರೆ, ಫಾರೂಖ್ ಎಸ್. ಎಂ. ಕುಂಬ್ರ, ಮಜೀದ್ ಸಅದಿ ಉಸ್ತಾದ್ ಪೆರ್ಲ, ಮನಾಮ ಸೆಕ್ಟರ್ ಉಪಾಧ್ಯಕ್ಷ ಬದ್ರು ಮಂಚಿ, ರಫಾ ಸೆಕ್ಟರ್ ಅಧ್ಯಕ್ಷರಾದ ಸಲೀಂ ಹಾಜಿ ಕೆ. ಸಿ. ರೋಡ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದ್ ಸ್ವಾಗತಿಸಿದರು. ಝಕರಿಯಾ ಸಖಾಫಿ ಈಶ್ವರಮಂಗಳ ಕಾರ್ಯಕ್ರಮ ನಿರೂಪೀಸಿದರು. ನೋರ್ತ್ ಝೋನ್ ಕಾರ್ಯದರ್ಶಿ ಮುಹಮ್ಮದ್ ಅಲಿ ವೇಣೂರು ಧನ್ಯವಾದ ಸಮರ್ಪಿಸಿದರು. ಕೆಸಿಎಫ್ ರಾಷ್ಟ್ರೀಯ, ಝೋನಲ್, ಸೆಕ್ಟರ್, ಯುನಿಟ್ ಗಳ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







