janadhvani

Kannada Online News Paper

ಅಡ್ಕರೆಪಡ್ಪು ಬೆಳ್ಮ: ಮೀಲಾದ್ ಸಂಭ್ರಮ ಹಾಗೂ ಸಂದೇಶ ಜಾಥಾ

ದೇರಳಕಟ್ಟೆ: ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸ ಅಡ್ಕರೆಪಡ್ಪು ಬೆಳ್ಮ ಇದರ ವತಿಯಿಂದ ಪ್ರವಾದಿಯವರ 1500 ನೇ ಮೀಲಾದ್ ಸಂಭ್ರಮ ಹಾಗೂ ಜಾಥಾ ಕಾರ್ಯಕ್ರಮ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಜಾಫರ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸದರ್ ಉಸ್ತಾದ್ ಹನೀಫ್ ಸಅದಿ ಅಲ್ ಪುರ್ಖಾನಿ ಸ್ವಾಗತಿಸಿದರು. ಖತೀಬ್ ಉಸ್ತಾದರಾದ ಮುಹಮ್ಮದ್ ಹಿಕಮಿ ಮಳಲಿ ಮುಖ್ಯ ಪ್ರಭಾಷಣಗೈದರು. ಅಧ್ಯಾಪಕರಾದ ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಕಾರ್ಯದರ್ಶಿ ಮುಸ್ತಫ, ಕೋಶಾಧಿಕಾರಿ ಮುಹಮ್ಮದ್, ಮದ್ರಸ ಉಸ್ತುವಾರಿ ಎ.ಬಿ. ಹುಸ್ಸೈನ್, ಜಮಾಅತ್ ಕಮಿಟಿ ಪಧಾಕಾರಿಗಳು, ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅದ್ಯಾಪಕರಾದ ಎಂ. ಮುಸ್ತಫ ಸಅದಿ ಹರೇಕಳ ಕಾರ್ಯಕ್ರಮವನ್ನು ನಿರೂಪಿಸಿದರು.