ಕಾರ್ಕಳ : ನೂರುಲ್ ಹುದಾ ಜುಮ್ಮಾ ಮಸೀದಿ ಬಜಗೋಳಿ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ನಡೆಯಿತು.
ಮೌಲಿದ್ ಮಜ್ಲಿಸ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ ನಂತರ ಮದ್ರಸ ಮಕ್ಕಳ ಮೀಲಾದ್ ಫೆಸ್ಟ್ ನಡೆಯಿತು.
ಮಸೀದಿಯ ಗೌರವಾಧ್ಯಕ್ಷರು ಅಬ್ದುರ್ರಹ್ಮಾನ್ ಮುಸ್ಲಿಯಾರ್ ಬಜಗೋಳಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಹುಮೈದಿ ಪ್ರಾಸವಿಕ ಭಾಷಣ ಮಾಡಿದರು. ಸಭಾಧ್ಯಕ್ಷತೆಯನ್ನು ಪುತ್ತಾಕ ರವರು ನೆರವೇರಿಸಿದರು. ಕಾರ್ಯದರ್ಶಿ ಶೈಪುಲ್ಲಾ
ಸ್ವಾಗತಿಸಿ ಕೋಶಾಧಿಕಾರಿ ಸ್ವಾದಿಕ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಗೈದರು.







