ಪ್ರವಾದಿ (ﷺ) ಕಾಲಾತೀತ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ದಿನಾಂಕ ಅಗೋಷ್ಟ್ 29 ಶುಕ್ರವಾರ 5:00pm ಸರಿಯಾಗಿ ಅಬ್ಬಾಸಿಯ Aspire ಸ್ಕೂಲ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಸಾಹುಲ್ ಹಮೀದ್ ಸಅದಿ ಝುಹ್ರಿ ಹಾಗೂ ಆಡಳಿತ ವಿಭಾಗದ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಮತ್ತು ಕೆಸಿಎಫ್ ಕುವೈಟ್ ಉಲಮಾ, ಉಮರಾ ನಾಯಕರ ಉಪಸ್ಥಿತಿಯಲ್ಲಿ ಮೌಲೂದ್ ಪರಾಯಣದೊಂದಿಗೆ ಆರಂಭವಾಯಿತು.

ಕೆಸಿಎಫ್ ಕುವೈಟ್ ರಾಷ್ಟ್ರೀಯ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಜನಾಬ್ ಕಲಂದರ್ ಶಾಫಿ ಕಿರಾಹತ್ ಪಠಿಸಿದರು. ಕೆಸಿಎಫ್ ಕುವೈಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಮುಸ್ತಫ ಉಳ್ಳಾಲ ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಉದ್ಘಾಟನೆ ಗೈದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಆಡಳಿತ ವಿಭಾಗದ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಆಶಂಸಗೈದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಈದ್ ಮೀಲಾದ್ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಮರೆವಂತಿಲ್ಲ ಅವರಿಗೆ ಮನದಾಳದ ದುಆ ಮೂಲಕ ಅಧ್ಯಕ್ಷೀಯ ಭಾಷಣದಲ್ಲಿಶುಭಹಾರೈಸಿದರು.
ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ರಾಜ್ಯ SSF ಅಧ್ಯಕ್ಷರಾದ ಬಹು ಹಫೀಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಖ್ಯ ಪ್ರಭಾಷಣಗೈದರು.ಈ ಸಂದರ್ಭದಲ್ಲಿ ಇವರಿಗೆ KCF ನೆನಪಿನ ಕಾಣಿಕೆ ಕೊಟ್ಟು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಮುಸ್ಲಿಂ ಜಮಾತ್ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ಜನಾಬ್ ಅಬ್ದುಲ್ ಲತೀಫ್ ಸುಂಟಿಗೊಪ್ಪ ಕೊಡಗಿನಲ್ಲಿ ಕೆಸಿಎಫ್ ನಡೆಸಿದ ಸಾಂತ್ವಾನ ಅದರ ಕಾರ್ಯವೈಕರಿಯ ಬಗ್ಗೆ ತಿಳಿಸಿದರು. ಇವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈದ್ ಮೀಲಾದ್ ಕಾರ್ಯಕ್ರಮದ ಛೇರ್ಮನ್ ಬಹು ಹುಸೈನ್ ಮುಸ್ಲಿಯಾರ್ ಏರುಮಾಡ್ ಕಾರ್ಯಕ್ರಮದ ನಿರೂಪಣೆಯ ಪ್ರಮುಖ ಆಕರ್ಷಕರಾಗಿದ್ದರು.IC ನಾಯಕರೂ ಈದ್ ಮೀಲಾದ್ ಕಾರ್ಯಕ್ರಮದ ಕನ್ವೀನರ್ ಜನಾಬ್ ಯಾಕುಬ್ ಕಾರ್ಕಳ ಆಶಂಸಗೈದರು.
ಮುಖ್ಯ ಅತಿಥಿ, ಹಂಝ ಮುಸ್ತಫಾ CEO MMC ಹಾಗೂ TVS ಕಾರ್ಗೋ ಮಾಲಕರಾದ ಹೈದರ್ ಹಾಜಿ ಹೈದರ್ ಗ್ರೂಪ್, ಶೈಖ್ ಹಸನ್ ಬಾದಾಷ ಇವರಿಗೆ KCF ನೆನಪಿನ ಕಾಣಿಕೆ ಕೊಟ್ಟು ಸನ್ಮಾನ ಮಾಡಲಾಯಿತು.ಕೆಸಿಎಫ್ IC ಸಾಂತ್ವಾನ ಕಾರ್ಯದರ್ಶಿ ಜನಾಬ್ ಝಕರ್ರಿಯ್ಯಾ ಆನೆಕಲ್ ಅವರ ನೇತ್ರತ್ವದಲ್ಲಿ ನಡೆಸಿದ ಸುವನಿಯರ್ ಈ ಸಂಧರ್ಭದಲ್ಲಿ ಅನಾವರಣ ಗೊಳಿಸಲಾಯಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮರ್ಹೂಮ್ ಸಯ್ಯಿದ್ ಕೂರತ್ ತಂಞಳ್ ಅವರ ಸುಪುತ್ರ
ಸಯ್ಯಿದ್ ಮಸೂದ್ ತಂಞಳ್ ಕೂರತ್ ಅವರ ಉಪದೇಶ ಹಾಗೂ ಭಕ್ತಿನಿರ್ಭಯ ದುವಾ ಎಲ್ಲಾರ ಮನಸ್ಸನ್ನು ಪುಲಕಿತಗೊಳಿಸಿತು. ICF ಅಧ್ಯಕ್ಷರು ಅಲವಿ ತಂಜೇರಿ ಶುಭ ಹಾರೈಸಿದರು, KCF ದಪ್ಪು ತಂಡದ ಪ್ರದರ್ಶನ ಎಲ್ಲರ ಮನ ಮುಟ್ಟಿತು.ದಫ್ ತಂಡದ ಕಾರ್ಯಕರ್ತರಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರಶಸ್ತಿ ಪತ್ರ ನೀಡಲಾಯಿತು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಉಮರ್ ಝಹ್ರಿ,ರಾಷ್ಟ್ರೀಯ ನಾಯಕರಾದ ಜನಾಬ್ ಅಬ್ಬಾಸ್ ಬಳಂಜೆ ಕುವೈಟ್ ಕೊಡಗು ವೆಲ್ಫೇರ್ ಸಮಿತಿಯ ಕೋಶಾಧಿಕಾರಿ ಜನಾಬ್ ಇಸ್ಮಾಯಿಲ್,ಕುವೈಟ್ RSC ನಾಯಕರಾದ ಸಅದ್ ಮೂಸ, ,ಇಕ್ಬಾಲ್ ಕಂದಾವರ, ಮೂಸಾ ಇಬ್ರಾಹಿಂ, ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ಸಮಿತಿಯ ನಾಯಕರು ಉಪಸ್ಥಿತಿದ್ದರು. ಕೆಸಿಎಫ್ ಕುವೈಟ್ EYE ಟೀಮ್ ಅಚ್ಚು ಕಟ್ಟಾದ ಸ್ವಯಂಸೆವಕರೆಂದು ಎಲ್ಲಾರ ಪ್ರೀತಿಗೆ ಪಾತ್ರರಾದರು, ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಾಂತ್ವಾನ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಕಂದಾವರ ಧನ್ಯವಾದಗೈದರು. ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ತಬರುಕ್ ನೀಡಲಾಯಿತು.
ವರದಿ : ಪ್ರಕಾಶನ ಮತ್ತು ಪ್ರಸಾರ ವಿಭಾಗ ಕೆಸಿಎಫ್ ಕುವೈಟ್







