janadhvani

Kannada Online News Paper

KCF ವತಿಯಿಂದ ಕೊಪ್ಪಳ ಜೆಲ್ಲೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕೊಪ್ಪಳ : KCF ಅಂತಾರಾಷ್ಟ್ರೀಯ ಸಮಿತಿ ಮತ್ತು ಇಹ್ಸಾನ್ ಕರ್ನಾಟಕ ಕೊಪ್ಪಳ ಜಿಲ್ಲೆಯ ತಾವರೆಗೆರೆ ತಾಲೂಕಿನ ಬಸವಣ್ಣ ಕ್ಯಾಂಪ್ ಎಂಬ ಗ್ರಾಮದಲ್ಲಿ ರಿಯಾದ್ ಝೋನ್ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಇಲ್ಗಿನೂರ್ ಗ್ರಾಮದಲ್ಲಿ KCF

UAE ರಾಷ್ಟ್ರೀಯ ಸಮಿತಿ ಪ್ರಾಯೋಜಕತ್ವದಲ್ಲಿ

ರೂಪಾಯಿ 2 ಲಕ್ಷ ವೆಚ್ಚದಲ್ಲಿ 2 ಕೊಳವೆ ಬಾವಿ ಕೊರೆಯಿಸಿ, ಪಂಪ್ ಸೆಟ್ , ಟ್ಯಾಂಕಿ ಸಹಿತ ಎರಡು ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗಾಗಿ ದಿನಾಂಕ : 01-09-2025 ನೇ ಸೋಮವಾರ ಇಹ್ಸಾನ್ ಕರ್ನಾಟಕ ಅದ್ಯಕ್ಷರಾದ ಹಫೀಳ್ ಸಹದಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ,

EO ಅನ್ವರ್ ಅಸ್ ಅದಿ , ಇಹ್ಸಾನ್ ದಾಯಿ ಖಾಝಿ ಹಾಜ್ರತ್ ಗುಲಾಮ್ ನೂರಿ ಬೂದುಗುಂಪ, ಇಲ್ಗಿನೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರಣಪ್ಪ ಗೌಡ , ಬಸವಣ್ಣ ಕ್ಯಾಂಪ್ ಗ್ರಾಮ ಪಂಚಾಯತ್ ಸದಸ್ಯರಾದ ಮಾಧುಸ್ವಾಮಿ, ಊರಿನ ಪ್ರಮುಖರಾದ ಬಸವರಾಜ , ಮಹೇಶಪ್ಪ , ಅನ್ವರ್ ಸಾಬ್ ಮುಂತಾದ ಗಣ್ಯರು , ಊರಿನವರು ಉಪಸ್ಥಿತರಿದ್ದರು.

ಅನಿವಾಸಿ ಕನ್ನಡಿಗ ಸಂಘಟನೆ KCF ( ಕರ್ನಾಟಕ ಕಲ್ಚರಲ್ ಫೌಂಡೇಶನ್ ) ಮತ್ತು ಇಹ್ಸಾನ್ ಕರ್ನಾಟಕದ ಕಾರುಣ್ಯ ಕಾರ್ಯಕ್ರಮಗಳನ್ನು ಗಣ್ಯರು ಮತ್ತು ಊರಿನವರು ಮುಕ್ತ ಕಂಠದಿಂದ ಶ್ಲಾಘಿಸಿದರು.