ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ಆಚರಿಸಲಾಯಿತು.
ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ದುಆಗೈದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಸಭೆಯನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಶ್ರೀ ಎಚ್. ವಿ. ರವಿಶಂಕರ್ ಅಧ್ಯಕ್ಷರು ಕನ್ನಡ ಸಂಘ ಬಹರೈನ್, ಫಾದರ್ ರವಿ ಸುಧೀರ್ ರೊಬಿಸನ್ ಆನಂದ್ ಕನ್ನಡ ಚರ್ಚ್ ಬಹರೈನ್, ಅಜಿತ್ ಬಂಗೇರ ಅಧ್ಯಕ್ಷರು ಕನ್ನಡ ಸಂಘ ಬಹರೈನ್, ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವಾತಂತ್ರ್ಯೋತ್ಸವದ ಕುರಿತು ಮುಖ್ಯ ಭಾಷಣ ಮಾಡಿದರು.
ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ರಾಷ್ಟ್ರಗೀತೆ ಹಾಡಿದರು. ಎಡ್ಮಿನ್ ವಿಂಗ್ ಕಾರ್ಯದರ್ಶಿ ಸಿದ್ದೀಖ್ ಎಣ್ಮೂರು ಸ್ವಾಗತಿಸಿದರು. ಪ್ರೊಫೆಷನಲ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು. ರಾಷ್ಟ್ರೀಯ ಸಮಿತಿ, ಝೋನಲ್, ಸೆಕ್ಟರ್’ಗಳ ನಾಯಕರು, ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







