ಉಳ್ಳಾಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಇರಾಕ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ರವರು ರಜೆಯ ನಿಮಿತ್ತ ತವರಿಗೆ ತಲುಪಿದಾಗ ತನ್ನ ಊರಾದ ಕಿನ್ಯ ಬದ್ರಿಯಾ ನಗರದ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು SჄS ನ ನಾಯಕರು, ಕಾರ್ಯಕರ್ತರು ನೀಡಿದ ಗೌರವಾರ್ಪಣೆಯನ್ನು ಸಂತೋಷ ದೊಂದಿಗೆ ಸ್ವೀಕರಿಸಿದರು.
ಬದ್ರಿಯಾ ನಗರ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ SჄS ಬದ್ರಿಯಾ ನಗರ ಯುನಿಟ್ ಅಧ್ಯಕ್ಷ ಬಷೀರ್ ಹನೀಫಿ ಉಸ್ತಾದ್ ದುಆ ಗೆ ನೇತೃತ್ವ ನೀಡಿದರು.
SჄS ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಪುಣ್ಯ ಪ್ರವಾದಿಯ ಅನುಗ್ರಹೀತ ಪವಿತ್ರ ಜನ್ಮ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು.
ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್, ಕೋಶಾಧಿಕಾರಿ ನಾಟೆಕಲ್ ಅಬ್ಬಾಸ್ ಹಾಜಿ,ಉಪಾಧ್ಯಕ್ಷ ಟಿಂಬರ್ ಅಬ್ದುಲ್ ಹಮೀದ್,ಕಾರ್ಯದರ್ಶಿ ಕೆ.ಎಚ್ ಮೂಸಕುಂಞಿ, ಮುಹಮ್ಮದ್ ರಫೀಖ್, ಇಸ್ಮಾಈಲ್,ಆಲಿಕುಂಞಿ ಮೀಂಪ್ರಿ,ಅಬ್ದುಲ್ ಖಾದರ್,ಅಯ್ಯೂಬ್,ಮೋನು ಇಸ್ಮಾಈಲ್,SჄS ನ ನಾಯಕರಾದ ಅಶ್ರಫ್ ಸಅದಿ,ಫಾರೂಖ್,ಆರಿಫ್,ಇಕ್ಬಾಲ್,ಖಲಂದರ್ ಮುಂತಾದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.







